೨೧ ಸಾಧಕರಿಗೆ ಪ್ರಶಸ್ತಿ ವಿತರಣೆ.

ಹೊಸಪೇಟೆ-22- ಇತಿಹಾಸ ಕಾಲದಿಂದಲೂ ರಾಜಮಹಾರಾಜರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಜಶ್ರಯ ನೀಡಿ ಪ್ರತಿಭೆಯನ್ನು ಪೋಷಿಸುತ್ತಿದ್ದರು, ಆದರೆ ನಮ್ಮ ದೌರ್ಭಾಗ್ಯ ಪ್ರಸ್ತುತ ಅಂಥ ಕಾಲಘಟ್ಟವಿಲ್ಲ ಆದರೂ ನಮ್ಮಲ್ಲಿನ ಅಮುಲ್ಯ ರತ್ನಗಳನ್ನು ಹೆಕ್ಕಿ ಅವರಿಗೆ ಸೂಕ್ತ ಗೌರವ ನೀಡಬೇಕಾದ್ದು ನಮ್ಮ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಅನ್ಮೋಲ್ ಉತ್ಸವ ಕಾರ್ಯಕ್ರಮ ಆಯೋಜಿಸಿ ಸನ್ಮಾನ ಮಾಡಲಾಗುತ್ತಿದೆ ಎಂದು ಅನ್ಮೋಲ್ ಸಂಸ್ಥೆಯ ಸಂಸ್ಥಾಪಕರಾದ ಎಂ.ಎ.ವಲಿಸಾಹೇಬ್ (ಹಕೀಂಸಾಬ್) ಹೇಳಿದರು. ಅವರು ಅನ್ಮೋಲ್ ಉತ್ಸವ-೨೦೧೫ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಿಗೆ ಅನ್ಮೋಲ್ ರತ್ನ ಅವಾರ್ಡ್ ವಿತರಿಸಿ ಮಾತನಾಡುತ್ತಿದ್ದರು.  ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗಳನ್ನು ನೀರೆರೆದು ಪ್ರೋತ್ಸಾಹಿಸಬೇಕು ಇಲ್ಲದಿದ್ದಲ್ಲಿ ಪ್ರತಿಭೆ ಕಮರಿಹೋಗುತ್ತಿದೆ. ಅನ್ಮೋಲ್ ರತ್ನ ಪ್ರಶಸ್ತಿ ಅಮುಲ್ಯವಾದದ್ದು ಇದು ಆಯಾ ಪ್ರತಿಭೆಗಳಿಗೆ ತಕ್ಕಂತೆ ಅನ್ವಯವಾಗುತ್ತದೆ. ಇನ್ನೂ ದೇಶ ನಮ್ಮ ತಾಯಿ ನೆಲದ ಬಗ್ಗೆ ಎಲ್ಲರೂ ಗೌರವ ಭಾವನೆ ಹೊಂದಬೇಕು, ಯುವ ಸಮುದಾಯ ಒಂದಿಲ್ಲೊಂದು ಚಟಗಳಿಗೆ ದಾಸರಾಗಿ ಹಾಳಾಗುವುದನ್ನು ಬಿಟ್ಟು, ನಮ್ಮ ತಾಯಿ ನಾಡಿನ ಬಗೆಗೆ ಚಿಂತನೆ ನೆಡೆಸಬೇಕು, ಅಮುಲ್ಯ ಸಮಯವನ್ನು ವ್ಯರ್ಥ ಮಾಡದೆ ಸತ್ಕಾರ್ಯ ಮಾಡಿ ತಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು. ನಮ್ಮ ದೇಶದ ಸಂಸ್ಕೃತಿ, ಭಿನ್ನ ಆಚಾರವಿಚಾರಗಳು ಬೇರೆಯಾವುದೇ ದೇಶದಲ್ಲಿಲ್ಲ. ಆದರು ನಾವು ಹಿಂದಿದ್ದೇವೆ ಎನ್ನುವ ಕೀಳರಿಮೆ ನಮ್ಮಲ್ಲಿ ಕಾಡುತ್ತಿದೆ. ನಿರಂತರ ಪ್ರೋತ್ಸಾಹ ಅಗತ್ಯವಿದೆ  ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಕೊಪ್ಪಳದ ಶ್ರೀರಾಮಕೃಷ್ಣಾ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ  ಪರಮಪೂಜ್ಯ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ಮಾತನಾಡಿ, ಯಾರೆ ಆಗಲಿ ತಾಯಿ ಮತ್ತು ತಾಯಿ ನಾಡಿನ ಸೇವೆ ಎಂದಿಗೂ ಮರೆಯಬಾರದು, ಈ ದಿಸೆಯಲ್ಲಿ ಎಂ.ಎ.ವಲಿಸಾಹೇಬರ ಕಾರ್ಯಶ್ಲಾಘನೀಯವಾಗಿದ್ದು, ಎಲ್ಲವರೂ ಅವರನ್ನು ಅನುಕರಿಸಬೇಕಿದೆ ಎಂದ ಹೇಳಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿನವ ಬೀಚಿ ಗಂಗಾವತಿ ಪ್ರಾಣೇಶ್ ಮಾತನಾಡಿ, ಇಂದಿನ ಯುವ ಜನತೆ ಪುಸ್ತಕ ಪ್ರೇಮ ಮರೆಯುತಿದ್ದಾರೆ, ನೆಟ್‌ಲ್ಲಿ ಓಕೆ ವಾಟ್ಸಪ್‌ಲ್ಲಿ ಮದುವೆಯಾಗುವ ಸಂಸ್ಕೃತಿ ಇತ್ತೀಚಿಗೆ ಬಂದುಬಿಟ್ಟಿದೆ. ಯುವ ಸಮುದಾಯ ದಾರಿ ತಪ್ಪುತ್ತಿದೆ, ದೊಡ್ಡವರ ಮಾತುಗಳನ್ನು ಓದಿ ತಿಳಿಯಬೇಕು, ಭಾಷಣ ಮಾಡುತ್ತಿದ್ದರೆ ಅವುಗಳನ್ನು ನೋಟ್ ಮಾಡಿಕೊಳ್ಳುವ ಮುಖೇನ ನಿಮ್ಮ ಜ್ಞಾನ ಭಂಡಾರ ಹೆಚ್ಚು ಮಾಡಿಕೊಳ್ಳಬೇಕು, ಇತರರ ಮಾತುಗಳನ್ನು ಕಲಿತು ಬದಕಬೇಕು ಅನುಭವದಲ್ಲಿ ಅಮೃತ ಇದು ಸುಳ್ಳಲ್ಲ ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಕೆ.ಬಿ.ಬ್ಯಾಳಿ ಮಾತನಾಡಿ, ಬೆಳೆ ಹಾಳಾಗುವಷ್ಟು ಮಳೆ ಬರಬಾರದು, ದೇಶ ಹಾಳಾಗುವಷ್ಟು ದ್ವೇಷ ಬೆಳೆಯಬಾರದು ಎಂದು ಮಾರ್ಮಿಕವಾಗಿ ನುಡಿದರು. ಐಕ್ಯತೆ ಮರೆತು ದೇಶವನ್ನು ಹೋಳು ಮಾಡುವವರ ಸಂಖ್ಯೆ ವೃದ್ಧಿಯಾಗುತ್ತಿದೆ, ದ್ವೇಷಾಸುಯೆಗಳು ಹೆಚ್ಚಾಗುತ್ತಿವೆ. ಹೇಳುವವರ ಮಾತುಗಳನ್ನು ಕೇಳುವ ವ್ಯವಧಾನ ಇಲ್ಲವಾಗಿದೆ. ನಮ್ಮ ಸಂಸ್ಕೃತಿ ಕಲೆ ಹಾಳಾಗಿ ಹೋಗುತ್ತಿದೆ ಯುವ ಸಮುದಾಯ ಪ್ರಶಸ್ತಿ ಪಡೆಯುವದೇ ತಮ್ಮ ಜವಬ್ದಾರಿ ಎಂದು ತಿಳಿಯಬಾರದು ಮುಂದಿನ ದಿನಗಳಲ್ಲಿ ನಾವು ಏನನ್ನು ಮಾಡಬೇಕು ದೇಶಕ್ಕೆ  ನೀಡುವ ಕೊಡುಗೆಯ ಕುರಿತು ಚಿಂತಿಸಬೇಕು ಕಾರ್ಯಗತ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಬಿಎಸ್ ಹನಸಿ ಮಾತನಾಡಿ, ಬದುಕಿನುದ್ದಕ್ಕೂ ನಾವು ನಮ್ಮ ಕರ್ತವ್ಯಗಳನ್ನು ಮಾಡುತ್ತಾಸಾಗಿದರೆ ಸಾಕು, ನಮ್ಮ ಪ್ರತಿಭೆಯನ್ನು ಗುರುತಿಸುವ ಪ್ರೋತ್ಸಾಹಿಸುವ ಜನ ಸೃಷ್ಟಿಯಾಗುತ್ತಾರೆ, ಇದು ಎಲ್ಲ ಕಾಲಕ್ಕೂ ಇದೆ ಇಂದು ಎಂ.ಎ.ವಲಿಸಾಹೇಬರು ಈ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ ಎಂದು ವಿವರಿಸಿದರು.
    ಗಂಗಾವತಿ ಎಪಿಎಂಸಿ ಸೆಕ್ರೇಟರಿ ಡಾ.ಶರಶ್ಚಂದ್ರ ರಾನಡೆ ಮಾತನಾಡಿ, ಸಾಹಿತ್ಯ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸುತ್ತದೆ ಪ್ರಿಯೊಬ್ಬರು ಪುಸ್ತಕ ಓದುವ ಮುಖೆ ತಮ್ಮ ಬಂಡಾರ ಹೆಚ್ಚಿಸಿಕೊಳ್ಳಿ ಎಂದರು.
ಜಾನಪದ ಹಾಡುಗಾರರು ಮತ್ತು ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಹಂಡಗಿ ಚಿಲವಾಡಗಿ ಅವರು ಮಾತನಾಡಿ, ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು ಇದಕ್ಕೂ ಮುನ್ನಾ ಹಂಡಗಿಯವರು ಜಾನಪದ ಹಾಡು ಮತ್ತು ಚುಟುಕು ಹೇಳುವ ಮೂಲಕ ಎಲ್ಲರನ್ನು ರಂಜಿಸಿದರು.
ಅನ್ಮೋಲ್ ಗ್ರುಪ್ ಆಫ್ ಕಂಪನಿಯ ಎಂ.ಎ.ವಲಿಸಾಹೇಬ್ (ಹಕೀಂಸಾಬ್) ಅವರು, ಸಾಹಿತಿ ಕೆ.ಬಿ.ಬ್ಯಾಳಿ (ಕುಕನೂರು) ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ (ಗಂಗಾವತಿ), ಕಾನೂನು ವಿದ್ಯಾರ್ಥಿಗಳಿಗೆ ರಿಸರ್ಚ್ ಗೈಡ್ ಆಗಿ ಸೇವೆ ಸಲ್ಲಿಸುತ್ತಿರುವ ಕೊಪ್ಪಳ ಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಹನಸಿ, (ಕೊಪ್ಪಳ) ಗಂಗಾವತಿ ಎಪಿಎಂಸಿ ಕಾರ್ಯದರ್ಶಿ, ಸಾಹಿತಿ ಡಾ.ಶರಶ್ಚಂದ್ರ ರಾನಡೆ (ಗಂಗಾವತಿ), ಕೊಪ್ಪಳ ಚುಸಾಪ ಅಧ್ಯಕ್ಷ ಹನುಮಂತಪ್ಪ ಹಂಡಗಿ ಚಿಲಕವಾಡಗಿ (ಕೊಪ್ಪಳ), ಬಿಜಾಪುರ ಎಸ್‌ಎಸ್ ಇನ್ಸುಟ್ಯೂಟ್‌ನ ಚಿತ್ರಕಲಾವಿದ ವಿವಿ ಹಿರೇಮಠ ಸೇರಿದಂತೆ ಕಲಾ
ನಂತರ ಅನ್ಮೋಲ್ ಆಹ್ಮದ್ ಖಾದ್ರಿ ಅವರ ೧೫ ನೇ ಹುಟ್ಟುಹಬ್ಬದ ನಿಮಿತ್ಯ ಕೇಕ್ ಕತ್ತರಿಸಲಾಯಿತು. ವೇದಿಕೆಯಲ್ಲಿ ಅನ್ಮೋಲ್ ಪಬ್ಲಿಕ್ ಸ್ಕೂಲ್ ಸಂಚಾಲಕರಾದ ಮಲ್ಕಾಬೇಗಂ ಎಂ.ಎ.ವಲಿಸಾಹೇಬ್, ಕು.ಅನ್ಮೋಲ್ ಆಹ್ಮದ್ ಖಾದ್ರಿ, ಪ್ರೇಮ ಎಂ ಗೌಡ, ಕು.ಜೀಯಾ ಆಹ್ಮದ್ ಖಾದ್ರಿ ಹಾಗೂ ಮಂಕೇಶ್ ಪತ್ರಿಕೆಯ ಸಂಪಾದಕ ಅಕ್ಬರ್‌ಸಾಬ್ ಹುಬ್ಬಳ್ಳಿ ಸೇರಿದಂತೆ ಇತರರಿದ್ದರು. ಅನ್ಮೋಲ್ ಟೈಮ್ಸ್ ಪತ್ರಿಕೆಯ ಉಪಸಂಪಾದಕ ನಾಗರಾಜ್ ಇಂಗಳಗಿ ಸ್ವಾಗತಿಸಿದರು, ಲಕ್ಷ್ಮಿಕಾಂತ್ ಹೇರೂರ್ ನಿರೂಪಿಸಿದರು. ಅನ್ಮೋಲ್ ಪಬ್ಲಿಕ್ ಶಾಲೆ ಮಕ್ಕಳ ನೃತ್ಯ ಅಕರ್ಷಕವಾಗಿತ್ತು. ಗಂಗಾವತಿಯ ಅಂದಾನ್ ಮೆಲೋಡಿಸ್‌ನ ಸಂಗಡಿಗರ ಗಾಯನ ಮನಸೂರೆಗೊಂಡಿತು.

ವಿದರಾದ ಹನುಮಂತಪ್ಪ ನಾಯಕ ವಕೀಲರು (ಮಲ್ಲಾಪುರ), ಐಲಿ ಮಾರುತಿ(ಗಂಗಾವತಿ), ಶೆಡ್ಡಿ ರಮೇಶ್(ಗಂಗಾವತಿ), ಮೈಲಾರಪ್ಪ ಶ್ಯಾವಿ (ಗಂಗಾವತಿ), ಎಂ.ಪರಶುರಾಮ್ ಪ್ರಿಯಾ(ಗಂಗಾವತಿ), ಗಿರಿರಾಜ್ ಆನೆಗೊಂದಿ, ಅಮರೇಶ್ ಇಂಗಳಗಿ (ಗಂಗಾವತಿ), ಕಲಾವತಿ ವಿ.ಶಿರವಾರ (ಗಂಗಾವತಿ), ಶ್ರೀಮತಿ ಪ್ರೇಮಾ ಎಂ ಶಂಕರಗೌಡ (ಬಳ್ಳಾರಿ), ಬಿ.ಸೈಯ್ಯದ್ ಹುಸೇನ್ (ಕಂಪ್ಲಿ), ಇವರಿಗೆ ಅನ್ಮೋಲ್ ರತ್ನ ೨೦೧೫ ಪ್ರಶಸ್ತಿ ನೀಡಿ ಗೌರವಿಸಿದರು.

Please follow and like us:
error