ಕ್ರೀಡೆಯು ಜೀವನದ ಅವಿಭಾಜ್ಯ ಅಂಗವಾಗಿದೆ ಕೆ.ಎಂ.ಸಯ್ಯದ್.

ಕೊಪ್ಪಳ- ಕ್ರೀಡೆಯು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಸಯ್ಯದ್ ಫೌಂಡೇಶನ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಿಲ್ಲತ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಪೂರ್ವ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕ್ರೀಡಾದ್ವಜವನ್ನು ನೇರವೇರಿಸಿ ಮಾತನಾಡುತ್ತ,ಕ್ರೀಡೆಯು ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು,ಮಾನಸಿಕವಾಗಿ ಸದೃಡವಾಗಿರಬೇಕಾದರೆ ಮೊದಲು ದೈಹಿಕವಾಗಿ ಸದೃಡರಾಗಿರಬೇಕು,ದೈಹಿಕ ಹಾಗೂ ಮಾನಸಿಕ ಸದೃಡತೆಗೆ ಕ್ರೀಡೆಗಳ ಅವಶ್ಯವಿದೆ.ಜೀವನದಲ್ಲಿ ಸಾಧನೆಯ ಶಿಖರವನ್ನು ಮುಟ್ಟಬೇಕಾದರೆ ಗುರಿ ಹಾಗೂ ಉದ್ದೇಗಳು ಮುಖ್ಯವಾಗಿವೆ.ಗುರಿ ಹಾಗೂ ಉದ್ದೇಶಗಳ ಈಡೇರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ.ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯು ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು.
  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭೆಯ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ ಮಾತನಾಡಿ,
ನಗರಸಭೆಯ ಅಧ್ಯಕ್ಷರಾದ ಬಸಮ್ಮ ಹಳ್ಳಿಗುಡಿ ಕ್ರೀಡಾಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಪೂರ್ವ ಕ್ಲಸ್ಟರಿನ ಸಿ.ಆರ್.ಪಿ,ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ,ವಲಯ ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ,ಮಾಜಿ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್,ಅಂಜುಮನ್ ಕಮೀಟಿ ಅಧ್ಯಕ್ಷರಾದ ಎಂ,ಪಾಷಾ ಕಾಟನ್,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ, ಮಿಲ್ಲತ್ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ ಹಜೀಜ,ಇಮಾಮ ಹುಸೇನ ಸಿಂದೋಗಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮನಿರ್ದೇಶಿತ ರಾಜ್ಯ ಉಪಾಧ್ಯಕ್ಷರಾದ ಶಂಭುಲಿಂಗನಗೌಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ,ಉಪಾಧ್ಯಕ್ಷರಾದ ಮಂಜುನಾಥ,ಬಸವನಗೌಡ,ಪೂರ್ಣಿಮಾ ಮುಂತಾದವರು ಹಾಜರಿದ್ದರು.
ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ ಪ್ರತಿಜ್ಞಾನವಿಧಿ ಬೋಧಿಸಿದರು.
ಮಿಲ್ಲತ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಸಾದಿಕ್ ಅಲಿ ಸ್ವಾಗತಿಸಿ,ಮುಖ್ಯೋಪಾಧ್ಯಾಯರಾದ ಖಾಜಾಮೈನುದ್ದಿನ್ ವಂದಿಸಿದರು.

ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ,ಸೋಲು-ಗೆಲುವು ಮುಖ್ಯವಲ್ಲ.ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಕ್ಕಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು.ಇಂದಿನ ಸೋಲು ನಾಳಿಯ ಗೆಲುವಾಗಲಿದೆ ಎಂದು ಹೇಳಿದರು.

Please follow and like us:

Related posts

Leave a Comment