ಐಕ್ಯತೆಯನ್ನು ಕಾಪಾಡಿ ರೇಖಾ ಪ್ರಕಾಶ್ ಕರೆ.

ಹೊಸಪೇಟೆ – ಮಹಿಳೆಯರು ಸಂಘಟಿತರಾಗಿ ಸಮಾಜದ ಐಕ್ಯತೆಯನ್ನು ಕಾಪಾಡಿ ಎಂದು ತಾಲೂಕು ಬೇಡ
ಜಂಗಮ ಸಮಾಜದ ಮಹಿಳಾ ವೇದಿಕೆಯ ಅಧ್ಯಕ್ಷೆ ರೇಖಾ ಪ್ರಕಾಶ್ ಕರೆ ನೀಡಿದರು.
    ಅವರು
ನಗರದ ರಾಣಿಪೇಟೆಯಲ್ಲಿರುವ ಬಯಲಾಂಜಿನೇಯ ದೇವಸ್ಥಾನ ದಲ್ಲಿಂದು ಪವಿತ್ರ ಶ್ರಾವಣ ಮಾಸದ
ಪ್ರಯುಕ್ತ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ 
ಮಾತನಾಡುತ್ತಾ ಮಹಿಳೆಯರ ಏಳ್ಗೆಯಿಂದ  ಸಮಾಜವು ಶೀಘ್ರವಾಗಿ ಅಭಿವೃದ್ಧಿಯಾಗುವುದರಿಂದ ಈ
ನಿಟ್ಟಿನಲ್ಲಿ ಮಹಿಳೆಯರಿಗೆ ಉತ್ತಮ ಶಿಕ್ಷಣ ಹಾಗೂ ಭೌತಿಕ ಭದ್ರತೆಯನ್ನು ಒದಗಿಸಿಬೇಕೆಂದು
ಆಶಿಸಿದರು.
    ಇದೇ ಸಂದರ್ಭ ದಲ್ಲಿ  ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ
ಕಾಶಿನಾಥಯ್ಯ ಮಾತನಾಡಿ ಸುಮಂಗಲಿಯರಿಗೆ ಉಡಿ ತುಂಬುವುದು ಹಿಂದೂ ಸನಾತನ ಪದ್ಧತಿಯಾಗಿದ್ದು
ಇಂದಿಗೂ ಮಹಿಳೆಯರಿಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನ ನೀಡುತ್ತಿರುವುದು ಇದಕ್ಕೆ
ನಿದರ್ಶನ, ಪ್ರತಿ ಯೊಬ್ಬ

ರು ಸಕ್ರಿಯರಾಗಿ ಒಗ್ಗಟ್ಟಿನಿಂದ  ಸಮಾಜ ಕಟ್ಟುವ ಕೆಲಸವನ್ನು
ಮಾಡಬೇಕು ಎಂದು ಕರೆ ನೀಡಿದರು.
    ತಾಲೂಕು ಬೇಡ ಜಂಗಮ ಸಮಾಜದ ಕಾರ್ಯದರ್ಶಿ
ಬಸವರಾಜ. ಎ.ಎಮ್, ವೀರಯ್ಯ.ಎಸ್.ಎಂ, ಎಂ.ಎಂ.ವಿರುಪಾಕ್ಷಯ್ಯ, ಡಿ.ಎಂ.ವಿರೇಶ್, ಎಲ್.
ಅಂಬ್ರೀಶ್ವರಯ್ಯ, ಬಸಯ್ಯ ಸ್ವಾಮಿ, ಮಹಿಳಾ ವೇದಿಕೆಯ ಪದಾಧಿಕಾರಿಗಳಾದ ಶಕುಂತಲಾ, ಉಮಾ,
ರೇಖಾರಾಣಿ, ಪ್ರತಿಮಾ ಕುದುರೆಮೊತಿ, ವೀರ ಮಂಗಳಮ್ಮ, ವಿಜಯಲಕ್ಷ್ಮಿ, ವಿ.ಹೆಚ್.ಎಂ.
ಗಂಗಮ್ಮ, ರೇಖಾ ಹಿರೇಮಠ, ಅರ್ಚನಾ, ವಿಜಯಲಕ್ಷ್ಮೀ ಹಿರೇಮಠ ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.
    ಹಬ್ಬಗಳ ಸಂದರ್ಭದಲ್ಲಿ ಲಕ್ಷ್ಮೀಗೆ  ಸೀರೆ ಉಡಿಸಿ
ಶೃಂಗರಿಸುವುದು ಹೇಗೆ ಎನ್ನುವ ತರಬೇತಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಗರದ ಶೋಭಾ
ಶಾಂತವೀರ, ಗಾಯತ್ರಿ, ಶೃತಿ ಮತ್ತು ಉಜ್ವಲ ಮಹಾದೇವಯ್ಯನವರು ಲಕ್ಷ್ಮೀಯ ಅಲಂಕಾರವನ್ನು
ಮಾಡಿ ವಿವರಿಸಿದರು.
    ಸುಮಾರು ನೂರಕ್ಕೂ ಹೆಚ್ಚು ಸುಮಂಗಲಿ ಯರಿಗೆ ಉಡಿ ತುಂಬಲಾಯಿತು. ಶಕುಂತಲಾ ಸ್ವಾಗತಿಸಿದರು.

Please follow and like us:
error