You are here
Home > Koppal News > ೬ನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳಕ್ಕೆ ಪ್ರಾತಿನಿದ್ಯ.

೬ನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳಕ್ಕೆ ಪ್ರಾತಿನಿದ್ಯ.

ಕೊಪ್ಪಳ-14- ಬಾಗಲಕೋಟದಲ್ಲಿ ಅಕ್ಟೋಬರ್ ೧೭ ಮತ್ತು ೧೮ ರಂದು ಎರಡು ದಿನಗಳ ಕಾಲ ನಡೆಯುವ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳದ ೫ ಜನರಿಗೆ ಅವಕಾಶ ದೊರಕಿದೆ. ೨೦೧೪ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಮಹಿಳಾ ಲೋಕ ಪತ್ರಿಕೆ ಸಂಪಾದಕರಾದ ಶ್ರೀಮತಿ ಸಾವಿತ್ರಿ ಮುಜಮದಾರ ರವರ ಹೆಣ್ಣು ಹೆಜ್ಜೆ (ಅಂಕಣ ಬರಹ) ಕೃತಿಗೆ ಮತ್ತು ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಜಾಜಿ ದೇವೇಂದ್ರಪ್ಪರವರ ದೇವರ ರಾಜಕೀಯ ತತ್ವ (ಅನುವಾದ) ಕೃತಿಗಳು ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿವೆ. ಯುವ ಕವಿ ಸಿರಾಜ್ ಬಿಸರಳ್ಳಿರವರು ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ. ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರಿಗೆ  (ಶಿಕ್ಷಣ ಕ್ಷೇತ್ರದ ಸೇವೆಗಾಗಿ) ಹಾಗೂ ಪತ್ರಕರ್ತರಾದ ಮಂಜುನಾಥ ಗೊಂಡಬಾಳರವರಿಗೆ (ಪತ್ರಿಕೋದ್ಯಮ) ಸನ್ಮಾನಿಸಲಿದ್ದಾರೆ.

Leave a Reply

Top