ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕೊಪ್ಪಳ ಅ. : ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಬಿ.ಪಿ.ಅಡ್ನೂರ ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಏರ್ಪಡಿಸಲಾಗಿದ್ದ ಮರ್ಹ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತಿರ್ಮಾನಿಸಲಾಗಿದ್ದು ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ದತೆಗಳು ಆರಂಭವಾಗಿವೆ, ನಮ್ಮ ಜಿಲ್ಲೆಯಲ್ಲಿಯೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುವುದು ಅಕ್ಟೋಬರ್ ೨೨ ರಂದು ಈ ಸಮಾರಂಭ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದು ಮರ್ಹ ವಾಲ್ಮೀಕಿ ಅವರ ಭಾವ ಚಿತ್ರವನ್ನುವನ್ನೋಳಗೊಂಡ ಮೆರವಣೆಗೆ ಸಂಸ್ದಾನ ಗವಿಮಠದಿಂದ ಆರಂಭಗೋಳ್ಳಿಲಿದೆ, ಪರಮ ಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಮೇರೆವಣೆಗೆಗೆ ಚಾಲನೆ ನೀಡಿಲಿದ್ದಾರೆ ಮೇರವಣೆಗೆಯು ಗಡಿಯಾರ ಕಂಬ ವೃತ್ತದ ಮೂಲಕ ಹಾಯ್ದು ಜವಾಹರ ರಸ್ತೆಯಲ್ಲಿ ಸಂಚರಿಸಿ ಅಶೋಕ ವೃತ್ತದಿಂದ ಸಾಹಿತ್ಯ ಭವನ ತಲುಪಲಿದೆ ಸಾಹಿತ್ಯ ಭವನದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಲು ಹಂಪಿ ಕನ್ನಡ ವಿಶ್ವ ವಿದ್ಯಾಲಯ ಸಹಪ್ರಾದ್ಯಾಪಕ ರಮೇಶ ನಾಯಕ ಅವರನ್ನು ಆಹ್ವಾನಿಸಲಾಗುವುದು ಮೇರವಣೆಯಲ್ಲಿ ಐತಿಹಾಸಿಕ ಮತ್ತು ಸಾಂಸ್ಕ್ರತಿಕ ಪರಂಪರೆ ಬಿಂಬಿಸುವ ಸ್ಧಬ್ದ ಚಿತ್ರಗಳನ್ನು ಹೊರಡಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗಾಗಿ ಐದು ಉಪಸಮಿತಿಗಳನ್ನು ರಚಿಸಲಾಗಿದೆ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಹಾಯಕ ಆಯುಕ್ತ ಶರಣಬಸಪ್ಪ ಅವರನ್ನು ನೇಮಿಸಲಾಗಿದೆ ಅದೆರೀತಿ ಸ್ಧಬ್ದ ಚಿತ್ರ ನಿರ್ಮಾಣ ಸಮಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ ಪ್ರಚಾರ ಸಮಿತಿಗೆ ತಹಸಿಲ್ದಾರ್ ವಿಜಯ ಕುಮಾರ ಆಹಾರ ಸಮಿತಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅಶೋಕ ಕಲಘಟಗಿ ವೇದಿಗೆ ನಿಮಾಣ ಸಮಿತಿಗೆ ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಅಭಿಯಂತ ಎಸ್.ಕೆ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ಉಳಿದಂತೆ ಆಯಾ ಸಮಿತಿಗಳಲ್ಲಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಗಣ್ಯರು ಮುಖಂಡರುಗಳು ಸದಸ್ಯರಾಗಿರುತ್ತಾರೆ ಇದು ಮೊಟ್ಟಮೊದಲು ಸರ್ಕಾರದ ಜಯಂತಿ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮದ ಯಶಸ್ವಿಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಹಕಾರ ನೀಡುವುದು ಅಗತ್ಯವಾಗಿದೆ ಜಯಂತಿ ಕಾರ್ಯಕ್ರಮದಂದು ಸಾರ್ವತ್ರಿಕ ರಜೆ ಇರುವುದರಿಂದ ಸರ್ಕಾರದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪ್ಪದೆ ಹಾಜರಾಗಬೇಕು ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೋಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆಡ್ನೂರ ಅವರು ಹೇಳಿದರು
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಎಸ್. ಅಂಗಡಿ ನಗರಸಭೆ ಆಯುಕ್ತ ಹೆಚ್.ಬಿ. ಬೆಳ್ಳಿಕಟ್ಟಿ ಪ್ರಾಂಶುಪಾಲರಾದ ಸಿ.ವಿ.ಜಡಿಯವರ, ಪರಿಕ್ಷಿತರಾಜ ಅಲ್ಲದೆ ಗಂಗಾವತಿ ನಗರ ಸಭೆ ಅಧ್ಯಕ್ಷ ಬಸಪ್ಪ ನಾಯಕ, ನಾರಾಯಪ್ಪ, ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಚಂದಪ್ಪ ತಳವಾರ, ಎಂ.ಹೆಚ್ ವಾಲ್ಮೀಕಿ. ಲಕ್ಷ್ಮಣ ತಳವಾರ, ರತ್ನಾಕರ್ ಗುತ್ತಿಗೆದಾರ, ಹನುಮಂತಪ್ಪ ಹ್ಯಾಟಿ, ಇಂದಿರಾ ಭಾವಿಕಟ್ಟಿ ರಾಮಣ್ಣ ಕಲ್ಲಣ್ಣನವರ, ಅನುಸುಯಾ ವಾಲ್ಮೀಕಿ ಮುಂತಾದ ಗಣ್ಯರು ಹಾಜರಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
Please follow and like us:
error