ಕೊಪ್ಪಳ ಜಿ.ಪಂ. ಸ್ಥಾಯಿಸಮಿತಿ ಚುನಾವನೆಗೆ ಮತದಾರರ ಕರಡುಪಟ್ಟಿ ಪ್ರಕಟ

: ಆಕ್ಷೇಪಣೆಗಳಿಗೆ ಆಹ್ವಾನ
ಕೊಪ್ಪಳ ಡಿ. ೧೮ :ಕೊಪ್ಪಳ ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗೆ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
  ಸ್ಥಾಯಿ ಸಮಿತಿಯ ಚುನಾವಣೆ ಮತದಾರರ ಪಟ್ಟಿ ಇಂತಿದೆ.  ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸದಸ್ಯರುಗಳಾದ ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ, ಬಿ. ಲಕ್ಷ್ಮೀದೇವಿ ಹಳ್ಳೂರು, ಹನುಮಕ್ಕ ಹನುಮಂತಪ್ಪ ಚೌಡ್ಕಿ, ಪರಸಪ್ಪ ಕತ್ತಿ, ಸೀತಾ ಹಲಗೇರಿ, ವಿನಯಕುಮಾರ್ ಮೇಲಿನಮನಿ, ನಾಗನಗೌಡ ಮಾಲಿಪಾಟೀಲ್, ಭಾಗೀರಥಿ ಶಂಕರಗೌಡ ಪಾಟೀಲ, ವನಿತಾ ಗಡಾದ, ಕಸ್ತೂರಮ್ಮ ಪಾಟೀಲ್, ಜನಾರ್ಧನ ಹುಲಗಿ, ಜ್ಯೋತಿ ಬಿಲ್ಗಾರ್, ವಿಜಯಲಕ್ಷ್ಮಿ ರಾಮಕೃಷ್ಣ, ಪಿಲ್ಲಿ ವೆಂಕಟರಾವ್, ಹೇಮಾವತಿ ಲಂಕೇಶ, ಅಮರೇಶಪ್ಪ ಕುಳಗಿ, ಚನ್ನಮ್ಮ ಹೇರೂರು, ಗಂಗಣ್ಣ ಸಮಗಂಡಿ, ವೀರೇಶಪ್ಪ ಸಾಲೋಣಿ, ಅರವಿಂದಗೌಡ ಪಾಟೀಲ್, ರಾಮಣ್ಣ ಸಾಲಭಾವಿ, ಅಶೋಕ ತೋಟದ, ಉಮಾ ಶಿವಪ್ಪ ಮುತ್ತಾಳ, ಈರಪ್ಪ ಕುಡಗುಂಟಿ, ಹೇಮಲತಾ ಪೊಲಿಸ್ ಪಾಟೀಲ್, ಸಂಸದ ಶಿವರಾಮಗೌಡ, ಶಾಸಕರುಗಳಾದ ಸಂಗಣ್ಣ ಕರಡಿ, ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಈಶಣ್ಣ ಗುಳಗಣ್ಣವರ್, ಶಿವರಾಜ ತಂಗಡಗಿ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ಕೊಪ್ಪಳ ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಗಂಗಾವತಿ ತಾ.ಪಂ. ಅಧ್ಯಕ್ಷ ಬಸವರಾಜ ಹುಲಿಯಪ್ಪ, ಕುಷ್ಟಗಿ ತಾ.ಪಂ. ಅಧ್ಯಕ್ಷ ಶರಣು ಭೀಮಪ್ಪ ತಳ್ಳಿಕೇರಿ, ಮತ್ತು ಯಲಬುರ್ಗಾ ತಾ.ಪಂ. ಅಧ್ಯಕ್ಷ ಲಕ್ಷ್ಮವ್ವ ರಾಠೋಡ್.  ಈ ಕರಡು ಮತದಾರರ ಪಟ್ಟಿಯ ಕುರಿತು ಸಂಬಂಧಪಟ್ಟವರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಜಿಲ್ಲಾ ಪಂಚಾಯತಿ ಕಚೇರಿಗೆ ಡಿಸೆಂಬರ್ ೨೭ ರಂದು ಸಂಜೆ ೫ ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Please follow and like us:
error

Related posts

Leave a Comment