೨೮ ರಂದು ಗೀತ ನಮನ

ಕೊಪ್ಪಳ : ಸಾಹಿತ್ಯ, ಸಂಗೀತ ಹಾಗೂ ವೈಚಾರಿಕ ವೇದಿಕೆಯಾದ ಶಕ್ತಿ ಶಾರದೆಯ ಮೇಳವು ಇದೇ ತಿಂಗಳಿನ ದಿನಾಂಕ ೨೮ ರಂದು ಕೊಪ್ಪಳದಲ್ಲಿ ಖ್ಯಾತ ಹಿನ್ನಲೆ ಗಾಯಕರಾಗಿದ್ದ ಶ್ರೀ ದಿ|| ಪಿ.ಬಿ.ಶ್ರೀನಿವಾಸ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿದೆ.  
ಪ್ರತಿವಾದಿ ಭಯಂಕರ ಶ್ರೀನಿವಸ್ ಇವರು ಹಾಡಿರುವ ಕನ್ನಡದ ಗೀತೆಗಳನ್ನು ಮಾತ್ರ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ.  ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಗಾಯಕರು, ಸಂಗೀತಗಾರರು ಶಕ್ತಿ ಶಾರದೆಯ ಮೇಳ ಅಧ್ಯಕ್ಷರಾದ ಡಿ.ಎಂ.ಬಡಿಗೇರ ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೊರಲಾಗಿದೆ. ಮಾಹಿತಿಗಾಗಿ : ೯೯೬೪೩೨೮೬೭೭, ೭೪೧೧೨೮೫೬೭೭. ೯೦೩೬೨೬೫೦೨೭.

Related posts

Leave a Comment