ಮದ್ಯಪಾನ ಮಾಡಿ ಶಾಲೆಗೆ ಹಾಜರು : ಶಿಕ್ಷಕ ಅಮಾನತು

 ಮದ್ಯಪಾನ ಮಾಡಿ ಶಾಲೆಗೆ ಹಾಜರಾಗುತ್ತಿದ್ದ ಯಲಬುರ್ಗಾ ತಾಲೂಕು ಗುನ್ನಾಳದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಶರಣಗೌಡ ಪಾಟೀಲ್ ಅವರನ್ನು ಡಿಡಿಪಿಐ ಜಿ.ಹೆಚ್. ವೀರಣ್ಣ ಅಮಾನತುಗೊಳಿಸಿದ್ದಾರೆ.
  ಶಿಕ್ಷಕ ಶರಣಗೌಡ ಪಾಟೀಲ್ ಮದ್ಯಪಾನ ಮಾಡಿಕೊಂಡು ಶಾಲಾ ಕರ್ತವ್ಯಕ್ಕೆ ಹಾಜರಾಗುವುದು, ಕರ್ತವ್ಯಲೋಪ, ಅಸಭ್ಯ ವರ್ತನೆ ತೋರುವುದು ಅಲ್ಲದೆ ಅನಧಿಕೃತ ಗೈರು ಹಾಜರಾಗುವ ಕುರಿತು ಗುನ್ನಾಳ ಗ್ರಾಮಸ್ಥರು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.  ಈ ಕುರಿತಂತೆ ಯಲಬುರ್ಗಾ ಬಿಇಓ ಅವರು ಶಾಲೆಗೆ ಭೇಟಿ ನೀಡಿ ನೀಡಿದ ವರದಿಯ ಆಧಾರದಂತೆ ಶಿಕ್ಷಕ ಶರಣಗೌಡ ಪಾಟೀಲ್ ಅವರನ್ನು ಜು. ೧೭ ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply