ದೇವಾಲಯ ಚಕ್ರವರ್ತಿ ಇಟಗಿ ಉತ್ಸವ.

ಸೂಕ್ಷ್ಮಕೆತ್ತನೆಯ ಮೂಲಕ ಕೆತ್ತಲ್ಪಟ್ಟು ದೇವಾಲಯಗಳ ಚಕ್ರವರ್ತಿ ಎಂಬ ಬಿರುದನ್ನು ಹೊಂದಿರುವ ಇಟಗಿಯ ಮಹಾದೇವ ದೇವಾಲಯವು ಕ್ರಿ.ಶ ೧೧೧೨ ರಲ್ಲಿ ಮಹಾದೇವ ದಂಡನಾಯಕನು ಈ ದೇವಾಲಯವನ್ನು ನಿರ್ಮಿಸಿದನು ಎಂಬುದನ್ನು ದೇವಾಲಯದಲ್ಲಿ ದೊರೆತ ಶಿಲಾಶಾಸನಗಳ ಮೂಲಕ ತಿಳಿಯಬಹುದಾಗಿದೆ, ಕರ್ನಾಟಕವನ್ನಾಳಿದ ಅನೇಕ ರಾಜ ಮನೆತನಗಳಲ್ಲಿ ಕಲ್ಯಾಣ ಚಾಲುಕ್ಯ ರಾಜಮನೆತನವೂ ಒಂದು, ಇವರ ಕಾಲದ ಕಲೆ ಸಾಹಿತ್ಯವನ್ನು ಬಿಂಬಿಸುವಲ್ಲಿ ಒಂದಾದ ದೇವಾಲಯಚಕ್ರವರ್ತಿಯ ಕುರಿತಾದ ಮಾಹಿತಿ ೯೦೦ ವರ್ಷಗಳಷ್ಟು ಹಳೆಯದಾದ ಇಟಗಿಯ ಮಹಾದೇವದೇವಾಲಯವು ಉತ್ತರಕರ್ನಾಟಕದ ಪ್ರಸಿದ್ದ ತಾಣಗಳಲ್ಲಿ ಒಂದಾಗಿದ್ದು ಇತಿಹಾಸದ ಪುರಾವೆಗಳನ್ನು ಹುಡುಕುತ್ತಾ ಹೋದಂತೆ ಕೊಪ್ಪಳ ಜಿಲ್ಲೆಯ ಶ್ರೀ ಗವಿಮಠದಲ್ಲಿ ಅಶೋಕ ಚರ್ಕವರ್ತಿಯ ಶಿಲಾಶಾಸನ, ಕಿಲೇ ಗುಡ್ಡ, ಹನುಮನುದಯಿಸಿದ ನಾಡು ಎಂದೇ ಪ್ರಸಿದ್ದಿ ಪಡೆದ ಕಿಷ್ಕಿಂದೆ, ಆನೆಗುಂದಿ, ಕನಕಗಿರಿಯ ಕನಕಾಚಲಪತಿ ದೇವಾಲಯ, ಹಾಗೂ ಸುಪ್ರಸಿದ್ದ ಹುಲಿಗೆಮ್ಮದೇವಿ ದೇವಾಲಯ ಹೀಗೆ ಹಲವಾರು ಪ್ರಸಿದ್ದ ತಾಣಗಳಲೊಂದಾಗಿದೆ  ಹೀಗೆ ಗುರಿತಿಸಲ್ಪಟ್ಟಿರುವ ಇಟಗಿಯ ಮಹಾದೇವ ದೇವಾಲಯವು ಯಲಬುರ್ಗಾ ತಾಲೂಕಿನ ಕುಕನೂರು ಮಾರ್ಗವಾಗಿ ಬನ್ನಿಕೊಪ್ಪದಿಂದ ೫ ಕಿ.ಮಿ ಅಂತರದಲ್ಲಿದೆ ಇಟಗಿಗ್ರಾಮ.
ಇತಿಹಾಸದ ಪ್ರಕಾರ ಹಿನ್ನಲೆ :
ಕಲ್ಯಾಣಚಾಲುಕ್ಯರ ೬ನೇ ವಿಕ್ರಮಾದಿತ್ಯನು ಅನೇಕ ಯುದ್ದಗಳಲ್ಲಿ ದಿಗ್ವಿಜಯಗಳನ್ನು ಸಾಧಿಸಿ ಸಾಮ್ರಾಜ್ಯದಲ್ಲಿ ಸುಖ, ಶಾಂತಿ ನೆಮ್ಮದಿಗೆಯಾವುದೇ ಕೊರತೆ ಇರಲಿಲ್ಲ, ಎಂಬುದನ್ನು ಇತಿಹಾಸ ಮೂಲಕ ತಿಳಿಯುತ್ತೇವೆ, ಇವರಕಾಲದಲ್ಲಿ ರಚಿತವಾದ ಅನೇಕ ವಾಸ್ತು ಶಿಲ್ಪ ಪ್ರಕಾರ ಶೈಲಿಯಲ್ಲಿ ಇಟಗಿಯ ಮಹಾದೇವ ದೇವಾಲಯವು ಪ್ರಮುಖವಾಗಿದ್ದು ವಿಕ್ರಮಾದಿತ್ಯನ ದಂಡನಾಯಕನಾದ ಹಾಗೂ ಇಟಗಿಗ್ರಾಮದವನೆ ಆದ ಮಹಾದೇವ ದಂಡನಾಯಕ ವಿಕ್ರಮಾದಿತ್ಯನ ಸೇನಾಧಿಪತಿಯಾಗಿ ಅತನೊಂದಿಗೆರಾಜ್ಯ ವಿಸ್ತಾರಗೊಳಿಸಲು ಹೋರಾಡಿ ವೀರ ಸೇನಾನಿ ಎಂದೆನಿಸಿದ ಮಹಾದೇವ ದಂಡನಾಯಕ ತನ್ನ ಸಾಹಸ, ಪರಾಕ್ರಮಗಳಿಂದ ವಿಕ್ರಮಾದಿತ್ಯನಿಗೆ ಹತ್ತಿರದವನಾಗಿದ್ದ. ಈ ಹಿನ್ನಲೆಯಲ್ಲಿ ಮಹಾದೇವ ದಂಡನಾಯಕನು ತನ್ನ ಸಾಹಸ ಹಾಗೂ ಹೆಸರನ್ನು ಅಜರಾಮರವಾಗಿರಿಸಲು ನಿರ್ಧರಿಸಿ ಇಟಗಿಯಲ್ಲಿ ಮಹಾದೇವದೇವಾಲಯನ್ನು ನಿರ್ಮಿಸಿದ ಎಂಬ ಪ್ರತೀತಿ ಇದೆ.
ದೇವಾಲಯದ ನಿರ್ಮಾಣದಲ್ಲಿ ಮರಳು ಮಿಶ್ರಿತ ಕೆಂಪು ಕಲ್ಲನ್ನು ಹೊರತುಪಡಿಸಿ ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲನ್ನು (ಕ್ಲೋರೆಟಿಕ್‌ಸಿಸ್ಟ್) ಉಪಯೋಗಿಸುವ ಮೂಲಕ ಗಾಢವಾದ ಸೂಕ್ಷ್ಮ ಕೆತ್ತನೆಯನ್ನು ಮಾಡಲಾಗಿದೆ, ಗೋಪುರ, ಕಂಬಗಳ ಮೇಲೆ ಮೇಣದಂತೆಷ ಅತೀ ಸರಾಗವಾಗಿ ಕೆತ್ತಲ್ಪಟ್ಟಚಿಕ್ಕಚಿಕ್ಕ ಗೊಂಬೆಗಳು, ಮೂರ್ತಿಗಳು, ಶಿಲಾಬಾಲಕಿಯರು, ಹಾಗೂ ಡೋಲುಡಮರುಗವನ್ನು ಹಿಡಿದು ನರ್ತಿಸುವ ನರ್ತಕಿಯರು, ರಾಮಯಣ ಮಹಾಭಾರತದಂತಹ ಸನ್ನಿವೇಶಗಳನ್ನು ನೋಡಿದಾಗಿ ಕಲ್ಯಾಣಚಾಲುಕ್ಯರ ಕಾಲದ ಶಿಲ್ಪಿಗಳ ನೈಪುಣ್ಯತೆ ಎಂತಹದು ಎಂಬುದನ್ನು ತಿಳಿಯುವದರೊಂದಿಗೆ ಮತ್ತೋಮ್ಮೆ ಕಲ್ಯಾಣಚಾಲುಕ್ಯರ ಕಾಲ ಹೇಗಿದ್ದರಬಹುದೇ ಎಂಬ ಕಲ್ಪನಾಲೋಕದಲ್ಲಿ ವಿಹರಿಸಿದಂತೆ ಭಾಸವಾಗಿತ್ತದೆ.
ಮಹಾದೇವ ದೇವಾಲಯದ ಜೊತೆಯಲ್ಲಿ ದೇವಾಲಯದ ಆವರಣದಲ್ಲಿರುವ ಪುಷ್ಕರಣಿ, ನಾರಯಣ ದೇವಾಲಯ, ಚಂದಲೇಶ್ವರಿ ದೇವಾಲಯ, ಕಲ್ಯಾಣ ಚಾಲುಕ್ಯರ ಶಿಲಾ ಶಾಸನಗಳು, ದ್ವಾರ ಪಾಲಿಕೆಯರ ಮೂರ್ತಿಗಳು, ದಕ್ಷಿಣ ದಿಕ್ಕಿನಲ್ಲಿ ಶ್ರೀ ಸರಸ್ವತಿ ಮಠ ಹಾಗೂ ದೇವಾಲಯವು ಒಳಗೊಂಡಿರುವಂತಹ ಅದ್ಬುತವಾದ ದ್ವಾರತೋರಣವನ್ನು, ಎಂಟು ದಿಕ್ಕಿನಲ್ಲಿ ಒಂದೊಂದು ಲಿಂಗ ಮಂಟಪವನ್ನು, ಹಾಗೂ ಮುಖ ಮಂಟಪದ ಮೇಲ್ಛಾವಣಿಯಲ್ಲಿ ಕಲ್ಲರಳಿ ಹೂವಾಗಿರುವಂತೆ ಕೆತ್ತಲ್ಪಟ್ಟ ಶೈಲಿಯನ್ನು ನೋಡಬಹುದಾಗಿದೆ. ಹೀಗೆ ಹಲವಾರು ವೈಶಿಷ್ಟ್ಯಪೂರ್ಣ ವಿಷಯ, ಇತಿಹಾಸವನ್ನು ಹೊಂದಿರುವ ಇಟಗಿಯ ಮಹಾದೇವ ದೇವಾಲಯವನ್ನು ನೋಡಲು ಬರುವ ಪ್ರವಾಸಿಗರಿಗೇನು ಕೊರತೆಇಲ್ಲ, ಇಂತಹ ಇತಿಹಾಸ ಪ್ರಸಿದ್ದಿವುಳ್ಳ ಸ್ಥಳಕ್ಕೆ ಇನ್ನೂ ಹೆಚ್ಚಿನ ಸೌಕರ್ಯ ವ್ಯವಸೆ ಒದಗಿಸುವ ಅವಶ್ಯಕತೆ ಇದ್ದು, ಪ್ರವಾಸಿಗರಿಗೆ ತಂಗಲು ಸ್ಥಳ, ಶುದ್ದವಾದ ಕುಡಿಯುವ ನೀರಿನ ಸೌಕರ್ಯ ಹಾಗೂ ಉತ್ತಮವಾದ
ಸಾರಿಗೆ, ರಸ್ತೆ ವ್ಯವಸ್ಥೆ,ಇಂತಹ ಕುಂದು ಕೊರತೆಗಳು ನಿವಾರಣೆಯಾದಲ್ಲಿ ದೇವಾಲಯಗಳ
ಚಕ್ರವರ್ತಿಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಂದೇಹವೆಇಲ್ಲ.  ಕಲೆ,
ಸಾಹಿತ್ಯ ಎಂದಾಕ್ಷಣ ನೆನೆಪಾಗುವ ಸುಂದರವಾದ ಹಾಗೂ ಸೂಕ್ಷ್ಮಕೆತ್ತನೆಯ ದೇವಾಲಯಗಳು
ವಾಸ್ತು ಶಿಲ್ಪಗಳುಇತಿಹಾಸದ ಪುಟಗಳಲ್ಲಿಚ ಅಜರಾಮರವಾಗಿ ಉಳಿದಿದ್ದು,ಇಂತಹ ಇತಿಹಾಸ
ಸಾರುವಂತಹ ದೇವಾಲಗಳು ನಶಿಸದಂತೆ ಇವುಗಳ ಸಂರಕ್ಷಣೆಯಲ್ಲಿ ನಾವು ಕೈಜೊಡಿಸಿದಾಗ ಮುಂದಿನ
ಪಿಳಿಗೆಯೂ ಸಹ ಇಂತಹ ದೇವಾಲಯಗಳನ್ನು ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ
ನಾಗರಿಕರ ವೇದಿಕೆ ಅತ್ಯಂತ ಮುತುವರ್ಜಿಯಿಂದ ಕಳೆದ ೧೦ ವರ್ಷಗಳಿಂದ ಇಟಗಿ ಉತ್ಸವವನ್ನು
ಒಂದು ಸಾಂಸ್ಕೃತಿಕ ಉತ್ಸವವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಜನೇವರಿ ೭,೮, ಮತ್ತು ೯
ರಂದು ಮೂರು ದಿನಗಳ ಕಾಲ ಇಟಗಿ ಉತ್ಸವವನ್ನು ಮಹದೇವ ದಂಡನಾಯಕ ವೇದಿಕೆಯಲ್ಲಿ ನಡೆಸಲಿದೆ.
ಸುಮಾರು ೭೦ ಹೆಚ್ಚು ಕಲಾ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಲಿವೆ ಇದರ ಜೊತೆಗೆ ೭ನೇ
ಇಟಗಿ ಜನಪದ ಜಾತ್ರೆ ಹಾಗೂ ೪ನೇ ಕವಿ ಸಮ್ಮೇಳನವನ್ನು ಸಹ ಆಯೋಜಿಸಿಸದೆ,
  ಮೂರು ದಿನಗಳ ಕಾಲ ಜಾತ್ರೆಯ ಮುನ್ನಾ ದಿನಗಳಲ್ಲಿ ಸಾಂಸ್ಕೃತಿಕ ರಸದೌತಣವನ್ನು ನೀಡಿ ಪ್ರವಾಸಿಗರನ್ನು ಇಟಗಿಯತ್ತ ಸೆಳೆಯುವಲ್ಲಿ ನಾಗರೀಕರ ವೇದಿಕೆಯ ಈ ಪ್ರಯತ್ನ ಅಭಿನಂದನೀಯ. 
                                   – ಕವಿತಾ ಓಲಿ.

Please follow and like us:
error