ಕೊಪ್ಪಳ ಸಂಸದ್ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯದ ಅಂಗಡಿಗಳು ತೆರುವುಗೊಳಿಸಲು ಒತ್ತಾಯ

 ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ೧೫ ದಿನ ಕಳೆದರೂ ಚುನಾವಣಾ ಆಯೋಗ  ಕೊಪ್ಪಳ ಸಂಸದ್ ಕ್ಷೇತ್ರದಲ್ಲಿ ಅಕ್ರಮ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಲು ವಿಫಲವಾಗಿದೆ ಎಂದು ಸಿ.ಪಿ.ಐ.ಎಂ.ಎಲ್. ಪಕ್ಷದ ನಿಯೋಜಿತ ಅಭ್ಯರ್ಥಿ ಭಾರದ್ವಾಜ್  ಚುನಾವಣಾ ಆಯೋಗವನ್ನು ಎಚ್ಚರಿಸಿದ್ದಾರೆ.
                    ಅಬಕಾರಿ ಕಾಯ್ದೆಗಳನ್ನು ಗಾಳಿಗೆ ತೂರಿ ಸಿ.ಎಲ್.೨, ಸಿ.ಎಲ್.೭, ಮತ್ತು ಸಿ.ಎಲ್. ೯ ಸನ್ನದುಗಳ ಮಾಲೀಕರು ಗರಿಷ್ಠ ಮಾರಾಟ ಬೆಲೆಗಿಂತಲೂ ಒಂದು ಬಾಟಲ್‌ಗೆ ರೂ. ೩೦ ರಿಂದ ೫೦ ರೂ. ಹೆಚ್ಚು ಪಡೆಯುತ್ತಿದ್ದಾರೆ. ಹಳ್ಳಿಗಳಲ್ಲಿ ತಮ್ಮ ಬೆಲ್ಟ್ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಅಕ್ರಮ ಅಂಗಡಿ ಮಾಲೀಕರು ಹಳ್ಳಿಯಲ್ಲಿನ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತ ಲೂಟಿ ಮಾಡುತ್ತಿದ್ದಾರೆ. 
                    ಚುನಾವಣಾ ಆಯೋಗ ಕೂಡಲೇ ಗ್ರಾಮೀಣ ಪ್ರದೇಶದಲ್ಲಿರುವ ಅಕ್ರಮ ಮದ್ಯದಂಗಡಿಗಳನ್ನು ತೆರುವುಗೊಳಿಸಿ, ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಬಕಾರಿ ಕಾನೂನುಗಳನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ನಡೆಸುತ್ತಿರುವ ಅಕ್ರಮ ಮಧ್ಯದ ಅಂಗಡಿಗಳ ಪರವಾನಿಗೆ ಚುನಾವಣೆ ಮುಗಿಯುವವರಗೆ ರದ್ದು ಮಾಡಬೇಕೆಂದು ಸಿ.ಪಿ.ಐ.ಎಂ.ಎಲ್. ಪಕ್ಷ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

Leave a Reply