ಅಪಘಾತದಲ್ಲಿ ಕಾರ್ಮಿಕ ವೆಂಕಟೇಶ್ವರರಾವ್ ದುರ್ಮರಣ : ವಿಷಾದ : ಎ.ಐ.ಸಿ.ಸಿ.ಟಿ.ಯು.

 ಎ.ಐ.ಸಿ.ಸಿ.ಟಿ.ಯು.ನ ಹಿರಿಯ ಸದಸ್ಯ ವಾಚ್‌ಮನ್ ವೆಂಕಟೇಶ್ವರರಾವ್ ವಿದ್ಯಾನಗರದಲ್ಲಿ ಲಾರಿ ಅಪಘಾತದಲ್ಲಿ ದುರ್ಮರಣವನ್ನು ಹೊಂದಿದ್ದು, ಎ.ಐ.ಸಿ.ಸಿ.ಟಿ.ಯು.ನ ಜಿಲ್ಲಾ ಸಮಿತಿ ವಿಷಾದ ವ್ಯಕ್ತಪಡಿಸಿದೆ  
ಟಿ.ವಿ.ಎಸ್. ಶೋ ರೂಂ ಹತ್ತಿರ ಇರುವ ಎ.ಐ.ಸಿ.ಸಿ.ಟಿ.ಯು. ಕಾರ್ಯಾಲಯದಲ್ಲಿ ಸಭೆ ಸೇರಿರುವ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವಾಚ್‌ಮನ್ ವೆಂಕಟೇಶ್ವರರಾವ್ ಸಂಘಟನೆಗೆ ಮಾಡಿರುವ ಸೇವೆಗಳನ್ನು ನೆನೆಸಿಕೊಂಡರು. ಸಂಘಟನೆ ಮೃತನ ಬಂಧುಗಳಿಗೆ ಸಾಂತ್ವನ ಹೇಳಿ ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಲು ತೀರ್ಮಾನಿಸಿದ್ದಾರೆ. 
ಈ ಸಂತಾಪ ಸಭೆಯಲ್ಲಿ  ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿ ಬಸವರಾಜ, ಎ.ಐ.ಸಿ.ಸಿ.ಟಿ.ಯು. ತಾಲೂಕ ಅಧ್ಯಕ್ಷ ಮೋಹನ್, ಕಟ್ಟಡ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಖಾದರಬಾಷಾ ಕ್ರಾಂತಿಕಾರಿ ಯುವಜನ ಸಂಘದ ಮುಖಂಡ ಮುತ್ತಣ್ಣ ಮತ್ತು ಹತ್ತಾರು ಕಾರ್ಮಿಕರು ಈ ಸಂತಾಪ ಸಭೆಯಲ್ಲಿ ಪಾಲ್ಗೊಂಡು ಮೃತ ವೆಂಕಟೇಶ್ವರರಾವ್‌ರವರು ಸಂಘಟನೆಗೆ ಮಾಡಿದ ಸೇವೆಯನ್ನು ನೆನೆಪಿಸಿಕೊಂಡರು.
Please follow and like us:
error