ರೈಲ್ವೆ ಸೇತುವೆ ನಿರ್ಮಾಣಕ್ಕೆ ರೈಲ್ವೆ ಬೋರ್ಡ್ ಅನುಮತಿ : ಹರ್ಷ

 ಕೊಪ್ಪಳ ಮತ್ತು ಭಾಗ್ಯನಗರ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೇ ಗೇಟ್-೬೨ ಕ್ಕೆ ರೈಲ್ವೆ ಮೇಲ್ಸೇತುವೆ ಮತ್ತು ಕಿನ್ನಾಳ ಗೇಟ್-೬೪ ಕ್ಕೆ ರೈಲ್ವೆ ಕೆಳ ಸೇತುವೆ ನಿರ್ಮಾಣದ ೩೫. ೧೪ ಕೋಟಿ ರೂ. ಅಂದಾಜು ಪಟ್ಟಿಗೆ ಭಾರತೀಯ ರೈಲ್ವೆ ಬೋರ್ಡ್ ಮಂಜೂರಾತಿ ನೀಡಿದ್ದಕ್ಕಾಗಿ ಹೋರಾಟ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ಪಾನಗಂಟಿ ಹರ್ಷ ವ್ಯಕ್ತಪಡಿಸಿದ್ದಾರೆ.
  ಈ ಕುರಿತು ಪ್ರಕಟನೆ ನೀಡಿರುವ ಅವರು ನವದೆಹಲಿಯ ಭಾರತೀಯ ರೈಲ್ವೆ ಬೋರ್ಡ್ ನವರು, ಉಭಯ ರೈಲ್ವೆ ಗೇಟ್ ಬಳಿ ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ೩೫. ೧೪ ಕೋಟಿ ರೂ. ವೆಚ್ಚದ   ಅನುಮೋದನೆಗಾಗಿ ಕೇಂದ್ರದ ರೈಲ್ವೆ ಹಣಕಾಸು ನಿರ್ದೇಶನಾಲಯಕ್ಕೆ ಸಲ್ಲಿಸಿತ್ತು.  ಇದೀಗ, ರೈಲ್ವೆ ಮಂತ್ರಾಲಯದ ಹಣಕಾಸು ನಿರ್ದೇಶನಾಲಯವು ೩೫. ೧೪ ಕೋಟಿ ರೂ. ವೆಚ್ಚವನ್ನು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ತಲಾ ಶೇ. ೫೦ ರಷ್ಟು ಅನುದಾನ ಹಂಚಿಕೆ ಆಧಾರದ ಮೇಲೆ ೧೭. ೫೭ ಕೋಟಿ ರೂ.ಗಳ ಅನುದಾನದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ.  ಕೊಪ್ಪಳ ಜಿಲ್ಲೆಯ ಜನತೆಗೆ ಸ್ವಾತಂತ್ರ್ಯೋತ್ಸವ ಕೊಡುಗೆಯಾಗಿ ಕೇಂದ್ರ ಸರ್ಕಾರ ರೈಲ್ವೇ ಗೇಟ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಇದಕ್ಕೆ ಶ್ರಮಿಸಿದ  ಸಂಸದ ಸಂಗಣ್ಣ ಕರಡಿಯವರಿಗೆ ಭಾಗ್ಯನಗರದ ಹೋರಾಟ ಸಮಿತಿಯ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಮುಖಂಡರಾದ ಸುರೇಶ ಡೊಣ್ಣಿ, ಸುಬ್ಬಯ್ಯ ಸಲ್ಲ, ಶಂಕರ ಲಿಂಗಲಬಂಡಿ, ಡಾ.ಕೋಟ್ರೇಶ ಶೇಡ್ಮಿ, ಗಿರೀಶ ಪಾನಗಂಟಿ, ಕೃಷ್ಣ ಕಬ್ಬೇರ,ಮಂಜಪ್ಪ ದರಗದಕಟ್ಟಿ, ತಾ.ಪಂ ಸದಸ್ಯ ಶ್ರೀನಿವಾಸ ಹ್ಯಾಟಿ,ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಭೈರಾಪೂರು, ಪರಶುರಾಮಸಾ ಪವಾರ, ಸತೀಶ ಮೇಘರಾಜ್,ಮತ್ತೀತರರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply