ಸಂಸ್ಕೃತಿ ಪ್ರಕಾಶನ ಕೃತಿಗೆ ದಸಾಪ ಪ್ರಶಸ್ತಿ ಗರಿ

 ನಗರದ ಸಂಸ್ಕೃತಿ ಪ್ರಕಾಶನ ೨೦೧೩ ರಲ್ಲಿ ಪ್ರಕಟಿಸಿರುವ ಪ್ರಸಿದ್ಧ ಕವಿ ಸುಬ್ಬು ಹೊಲೆಯಾರ್ ಅವರ ’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ..’ ಪದ್ಯಗಳ ಸಂಕಲನಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ ಎಂದು ಪ್ರಕಾಶಕ ಸಿ. ಮಂಜುನಾಥ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸೆ. ೧೪ ಮತ್ತು ೧೫ ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹೆಸರಾಂತ ಸಾಹಿತಿ ಡಾ. ಅರವಿಂದ ಮಾಲಗತ್ತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ.. ಕೃತಿಯ ಹಸ್ತಪ್ರತಿಗೆ ೨೦೧೦ ನೇ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯೂ ದೊರಕಿತ್ತು ಎಂದು ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Please follow and like us:

Related posts

Leave a Comment