ಗೋಶಾಲಾ ರಸ್ತೆಯಲ್ಲಿ ಬೇಸಿಗೆಯ ಧಗೆಗೆ ತಂಪೆರೆಯುವ ನೀರಿನ ಅರವಟಿಗೆ ಆರಂಭ

ಕೊಪ್ಪಳ, ೦೪ : ಶಿವಶರಣೆ ಅಕ್ಕಮಹಾದೇವಿ ಜಯಂತಿಯ ನಿಮಿತ್ಯ ಪ್ರತಿ ವರ್ಷದಂತೆ ಈ ಸಲವೂ ಸತತ ನಾಲ್ಕನೇ ವರ್ಷ ಬೇಸಿಗೆಯ ಧಗೆಯಲ್ಲಿ ತಂಪೆರೆಯಲಿಕ್ಕಾಗಿ ನೀರಿನ ಅರವಟಿಗೆಯನ್ನು ಬಳ್ಳೊಳ್ಳಿ ಮಿಲ್ ಮುಂದೆ ಇಂದು ಆರಂಭಿಸಲಾಯಿತು. ನಗರದ ಕದಳಿ ಮಹಿಳಾ ವೇದಿಕೆ ಮತ್ತು ಇನ್ನರ್ ವ್ಹೀಲ್ ಮಹಿಳಾ ಕ್ಲಬ್ ಜಂಟಿ ಆಶ್ರಯದಲ್ಲಿ ಈ ಅರವಟಿಗೆ ಬೇಸಿಗೆ ಅವಧಿಯ ಮುಕ್ತಾಯದವರೆಗೂ ಕುಡಿಯುವ ನೀರಿನ ಸೇವೆ ಸಲ್ಲಿಸಲಿದೆ.
ಈ ಅರವಟಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ಕದಳಿ ಮತ್ತು ಇನ್ನರ್‌ವ್ಹೀಲ್ ತಂಡಗಳ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು, ಶೀಘ್ರದಲ್ಲಿ ನಗರಸಭೆಯ ವತಿಯಿಂದಲೂ, ಇನ್ನಿತರ ಸಂಘ-ಸಂಸ್ಥೆಗಳ ಸಹಾಯದಿಂದ ಸಾಧ್ಯವಾದಷ್ಟು ಕಡೆಗೆ ನೀರಿನ ಅರವಟಿಗೆ ಆರಂಭಿಸುತ್ತೇವೆ. ಸಮಾಜಪರ, ಜನಪರ ಧೋರಣೆಗಳುಳ್ಳ ಈ ಎರಡೂ ಸಂಸ್ಥೆಗಳು ಗೃಹ ಕೈಗಾರಿಕೆ, ಸಣ್ಣ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗವಕಾಶ ನೀಡುವಂತಹ ಯೋಜನೆಗಳನ್ನು ಕೈಕೊಳ್ಳಲಿ ಎಂದು ಹೇಳಿ ಶೀಘ್ರದಲ್ಲಿಯೇ ಈ ಸಂಸ್ಥೆಗೆ ನಗರಸಭೆಯ ವತಿಯಿಂದ ಒಂದು ನಿವೇಶನ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಕವಿ ಮಹೇಶ ಬಳ್ಳಾರಿ ನೀರಿನ ಅರವಟಿಗೆಯ ಪ್ರಯೋಜನಗಳ ಕುರಿತು ಮಾತನಾಡಿದರು. ಆರಂಭದಲ್ಲಿ ಡಾ. ರಾಧಾ ಕುಲಕರ್ಣಿ ಪ್ರಾರ್ಥಿಸಿದರು, ಕದಳಿ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಅರುಣಾ ನರೇಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕದಳಿ ಮಹಿಳಾ ವೇದಿಕೆ ಮತ್ತು ಇನ್ನರ್ ವ್ಹೀಲ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿ ಅರವಟಿಗೆಯ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು. ಇನ್ನರ್ ವ್ಹೀಲ್ ಕಾರ್ಯದರ್ಶಿ ಶುಭಾಂಗಿ ಔರಾದಿ, ಸದಸ್ಯರಾದ ಲಲಿತಾ ಕಡಿ, ವಿಜಯಾ ಬಳ್ಳೊಳ್ಳಿ, ಜ್ಯೋತಿ ಮಟ್ಟಿ, ಡಾ. ಕವಿತಾ ಹ್ಯಾಟಿ, ಅಪರ್ಣಾ ಬಳ್ಳೊಳ್ಳಿ, ಕವಿತಾ ಶೆಟ್ಟರ್, ಸುಧಾ ಶೆಟ್ಟರ್, ಪ್ರೇಮಾ ಮಟ್ಟಿ, ಸುಧಾ ಮಟ್ಟಿ ಮೊದಲಾದವರು ಭಾಗವಹಿಸಿದ್ದರು.
ವಾಣಿಜ್ಯೋದ್ಯಮಿಗಳಾದ ವಿಶ್ವನಾಥ ಬಳ್ಳೊಳ್ಳಿ, ಈಶಣ್ಣ ನಾಲವಾಡ, ವೀರೇಶ ಕೊಪ್ಪಳ ಉಪಸ್ಥಿತರಿದ್ದರು.

Related posts

Leave a Comment