ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ:೧೪, ನಗರಸಭೆ ಆವರಣದಲ್ಲಿ ಬೆಳೆಗ್ಗೆ,೧೦.೩೦ಕ್ಕೆ ನಗರಸಭೆಯ ೨೨.೭೫ ಹಾಗೂ ೭.೨೫ಶೇಕಡಾ ಯೋಜನೆಯಡಿಯಲ್ಲಿ ಬಡಜನರಿಗೆ ಗ್ಯಾಸ್ ಸಿಲೆಂಡರ್, ಹೊಲಿಗೆಯಂತ್ರ, ಸಿಂಟೆಕ್ಸ್ ಟ್ಯಾಂಕ್, ಬಡವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಪತ್ರಕರ್ತರಿಗೆ ಕಂಪ್ಯೊಟರ್ ವಿತರಣೆ ಮಾಡಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸರ್ಕಾರವು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಅನುಷ್ಠಾನಗೊಳಿಸಿದ್ದು, ಈ ಯೋಜನೆಗಳ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಾಮಾಣಿಕ ಪ್ರಯತ್ನಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇವುಗಳ ಸದ್ಬಳಕೆಯಿಂದ ಅಭಿವೃದ್ಧಿಗೆ ಪೂರಕವಾಗುತ್ತವೆ. ಬಡವರ ದಿನದಲಿತರ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿ-ವಿದ್ಯಾರ್ಥಿನಿಗಳು ಕಷ್ಟಪಟ್ಟು ಓದಿ ನಾಡಿಗೆ ಕೀರ್ತಿತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಅದ್ಯಕ್ಷರಾದ ಬಸಮ್ಮ ಹಳ್ಳಿಗುಡಿ, ಉಪಾದ್ಯಕ್ಷ ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ, ಶಿವಾನಂದ ಹೂದ್ಲೂರು, ಮುತ್ತುರಾಜ ಕುಷ್ಟಗಿ. ಮೌಲಾ ಹುಸೇನ ಜಮೇದಾರ, ಸಲೀಂ ಸಾಬ್, ಪ್ರಾಣೇಶ ಮಾದಿನೂರು, ಶರಣಪ್ಪ ಚಂದನಕಟ್ಟಿ, ಶ್ರೀಮತಿ ಸರಿತಾ ಸುಧಾಕರ, ಮಲ್ಲಪ್ಪ ಮುರಡಿ, ಪೌರಾಯುಕ್ತರಾದ ರಮೇಶ ಪಟ್ಟೇದ, ಇನ್ನೂ ಅನೇಕ ನಗರಸಭಾ ಸದಸ್ಯರು ಉಪಸ್ಥಿತಿದ್ದರು.
Please follow and like us:
error