You are here
Home > Koppal News > ತಾಲೂಕ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ತಾಲೂಕ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಕೊಪ್ಪಳ : ದಿನಾಂಕ ೨೬-೦೨-೨೦೧೪ ರಂದು ಜರುಗಿದ ಕೊಪ್ಪಳ ತಾಲೂಕ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘಕ್ಕೆ ರಾಮಣ್ಣ ಬಿ. ಬಾರಕೇರ ಅಧ್ಯಕ್ಷರಾಗಿ ಹಾಗೂ ಎ. ಬಸವರಾಜ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಬಸವರಾಜ ಕೊಂಕಲ್ ಚುನಾವಣಾ ಅಧಿಕಾರಿ ಪ್ರಮಾಣ ಪತ್ರ ನೀಡುವುದರೊಂದಿಗೆ ಘೋಷಿಸಿದ್ದಾರೆ. ಮತ್ತು ಉಳಿದ ೦೯ ಜನ ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರ ನಿಡುತ್ತಾ ಸಹಕಾರ ಪತ್ತಿನ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಕರೆನೀಡಲಾಯಿತು. 
ನಿರ್ದೇಶಕರುಗಳಾದ ನಾಗರಾಜ ರಾಟಿ, ರಾಜಾಭಕ್ಷಿ, ಮಂಜುನಾಥ ಅಬ್ಬಿಗೇರಿ, ಮನೋಹರ ವೇದಪಾಠಕ, ಬಸವರಾಜ ದೊಡ್ಡಮನಿ, ದೇವಪ್ಪ ಎಮ್.ಕೆ, ಉದಯಕುಮಾರ, ಸುಧಾ ಎಮ್.ಕೆ, ಮಂಜುಳಾ ಪಾಟೀಲ ಉಪಸ್ಥಿತರಿದ್ದರು.  

Leave a Reply

Top