ದೇಶದ ಪರಂಪರೆ ಸಂಸ್ಕೃತಿ ವಿಶ್ವಕ್ಕೆ ಮಾದರಿ : ಸಯ್ಯದ್‌

ಕೊಪ್ಪಳ ೨೪ : ನಮ್ಮದೇಶ ಒಂದು ಸುಂದರ ಹೂವಿನ ತೋಟವಿದ್ದಂತೆ ಇಲ್ಲಿ ವಾಸಿಸುವ ಪ್ರತಿಯೋಬ್ಬರು ಭಿನ್ನ-ಭಿನ್ನ ರೀತಿಯ ಸುಂದರ ಹೂಗಳಿದ್ದಂತೆ ಬಹುಭಾಷಿಕರ  ಬಹು ಜಾತಿಜನಾಂಗದವರು ವಾಸಿಸುವ ನಮ್ಮ ಈ ದೇಶದ ಸಂಸ್ಕೃತಿ ಪರಂಪರೆ ರಾಷ್ಟ್ರೀಯ ಭಾವೈಕ್ಯತೆ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಅಭಿಪ್ರಾಯ ಪಟ್ಟರು.ಅವರು ನಗರದ ಬಿ.ಟಿ.ಪಾಟೀಲ್ ನಗರದಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ಶ್ರೀ ಗೌರಿಸುತ ಮಿತ್ರ ಮಂಡಳಿ ಏರ್ಪಡಿಸಿದ ಸಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭದ ಉದ್ಘಾಟನೆ ನೆರೆವೆರಿಸಿ ಮಾತನಾಡುತ್ತ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದು ರಾಷ್ಟ್ರೀಯ ಹಬ್ಬಗಳ್ಳಿ ನಮ್ಮ ದೇಶದ ಸಂಸ್ಕೃತಿ ಅಡುಗಿದೆ ಇಂತಹ ಹಬ್ಬಗಳ ಆಚರಣೆಗಳಿಂದ ಪ್ರತಿಯೊಬ್ಬರಲ್ಲಿ ಸಹೋದರತ್ವ ಭಾವನೆ ಮೂಡಿ ಬರಬೇಕು ಅಂದಾಗ ಮಾತ್ರ ಹಬ್ಬಗಳು ಅರ್ಥಪೂರ್ಣವಾಗುತ್ತದೆ ಎಂದು ಕೆ.ಎಂ.ಸಯ್ಯದ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಸ್ತಾಯಿ ಸಮಿತಿ ಅಧ್ಯಕ್ಷ ಸಿದ್ದು ಮ್ಯಾಗೇರಿ ಸೇರಿದಂತೆ ಶ್ರೀ ಗೌರಿಸುತ ಮಿತ್ರಮಂಡಳಿ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಲ್ಲದೆ ಬಿ.ಟಿ.ಪಾಟೀಲ ನಗರದ ಗಣ್ಯರು ಸಾರ್ವಜನಿಕರು ಮತ್ತು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು 

Leave a Reply