ವಿವೇಕಾನಂದ ಶಾಲೆಯಲ್ಲಿ ಅಗ್ನಿ ಶಾಮಕ ದಳದ ಪ್ರಾತ್ಯಕ್ಷಿಕೆ

ಕೊಪ್ಪಳ, ೨೧ : ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕೊಪ್ಪಳ ಜಿಲ್ಲಾ ಅಗ್ನಿಶಾಮಕ ದಳದವರು ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದಾಗ ಪಾರಾಗುವ ಬಗೆ ಮತ್ತು ಬೆಂಕಿ ನಂದಿಸುವಿಕೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಮೂರು ವಿವಿಧ ಬಗೆಯ ಅಗ್ನಿ ಅನಾಹುತಗಳು, ಮೂರೂ ಬಗೆಯ ಅನಾಹುತಗಳಿಗೆ ಕೈಗೊಳ್ಳಲಾಗುವ ತುರ್ತು ಸೇವೆಗಳ ಪ್ರಾತ್ಯಕ್ಷಿಕೆಯನ್ನು ೧,೩೦೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವೀಕ್ಷಿಸಿ ಜ್ಞಾನ ಪಡೆದುಕೊಂಡರು.
ಅಗ್ನಿ ಅನಾಹುತ ಸಂಭವಿಸಿದಾಗ ತಿಳಿಸುವ ಬಗೆ, ಸಂಪರ್ಕದ ಸಂಖ್ಯೆಗಳು, ಕೈಗೊಳ್ಳಬಹುದಾದ ಪ್ರಾಥಮಿಕ ಹಚಿತದ ಪರಿಹಾರಗಳು, ನಂತರದ ಅಗ್ನಿ ಶಾಮಕ ದಳದ ಕಾರ್ಯ, ಸಾಹಸ ಕುರಿತಾಗಿ ಫೈಯರ್ ಸರ್ವಿಸ್ ಆಫೀಸರ್ ಬಿ. ರೇಣುಕಾರಾಧ್ಯ ನೇತೃತ್ವದಲ್ಲಿ, ಫೈಯರ್ ಮ್ಯಾನ್ ಮಂಜುನಾಥ ಬಂಡಿ, ಎಫ್.ಡಿ. ದೊಡ್ಡ ಬಸಪ್ಪ ಅಂಗಡಿ ಮತ್ತು ಹೋಮ್‌ಗಾರ್ಡ್ ಬಸವರಾಜ ಚಿಂತಾಮಣಿ ಸವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಅಗ್ನಿ ಶಾಮಕ ದಳದ ಕಛೇರಿ ಮತ್ತು ಕಾರ್ಯಗಳ ಕುರಿತಾಗಿ ಮಕ್ಕಳು ಕೇಳಿದ ಪ್ರಶ್ನೆಗೆ ಎಫ್.ಎಸ್.ಓ. ಬಿ. ರೇಣುಕಾರಾಧ್ಯ ಉತ್ತರಿಸಿದರು.
ಶಾಲಾ ಪ್ರಾಚಾರ್ಯ ಎ. ಧನಂಜಯನ್ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಜ್ಞಾನ ಒದಗಿಸಿಕೊಟ್ಟ ಅಗ್ನಿಶಾಮಕ ದಳದ ಎಲ್ಲ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Leave a Reply