ಜನಮನ ಸೂರೆಗೊಂಡ ಮುಂಗೈಕುಸ್ತಿ

 ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮೂರನೇ ದಿನದಲ್ಲಿ ಶ್ರೀಮಠದ ಆವರಣದಲ್ಲಿ ಮುಂಗೈ ಕುಸ್ತಿ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು. ಈ ಸ್ಪರ್ಧೆಯಲ್ಲಿ ನಾಡಿನ ಹಲವಾರು ಮುಂಗೈ ಕುಸ್ತಿಪಟುಗಳು ಭಾಗವಹಿದ್ದರು.

ಕಾಮನೂರ, ಚೆಳ್ಳಾರಿ, ದನಕನದಡ್ಡಿ, ಹಟ್ಟಿ, ಜಬ್ಬಲಗುಡ್ಡ, ಕುದರಿಮೋತಿ,ಲೇಬಗೇರಿ, ಶಹಪೂರ,ಮೊದಲಾದ ಗ್ರಾಮದ ಮುಂಗೈಕುಸ್ತಿಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.ಅತ್ಯಂತ ಕೂತುಹಲಕಾರಿ ಮತ್ತು ರೋಚಕವಾದ ಈ ಮುಂಗೈಕುಸ್ತಿ ಸ್ಪರ್ಧೆಗಳನ್ನು ನೋಡಲು ಅಪಾರ ಜನರು ನೆರೆದಿದ್ದರು. ವಿಜಯಕುಮಾರ ಕವಲೂರ ಅವರ ಉಸ್ತುವಾರಿಯಲ್ಲಿ ಈ ಸ್ಪರ್ಧೆಗಳು ಜರುಗಿದವು.  


Please follow and like us:
error