ಪ್ರಗತಿಪರ ಸಂಘಟನೆಗಳ ಬಗ್ಗೆ: ಹಿಂದೂ ಜಾಗರಣಾ ವೇದಿಕೆ ಆರೋಪ: ಖಂಡನೆ

ಅಖಿಲ ಭಾರತ ವಿದ್ಯಾರ್ಥಿ ಸಂಘ(ಐಸಾ) ಹಾಗೂ ಎಸ್.ಎಫ್.ಐ ಬಗ್ಗೆ ಹಗುರವಾಗಿ ಹೇಳಿಕೆ  ನೀಡಿರುವ ದೇಶ ಒಡೆಯುವ ಸಂಘಟನೆ, ದೇಶ ಕಟ್ಟುವ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ತಂತ್ರವಾಗಿದೆ ಎಂದು ಗಂಗಾವತಿ ತಾಲ್ಲೂಕ ಐಸಾ ಅಧ್ಯಕ್ಷ ಪರಮೇಶ್ವರ  ತಿಳಿಸಿದ್ದಾರೆ. 
ಹಿಂದೂ ಜಾಗರಣಾ ವೇದಿಕೆ, ಐಸಾ ಮತ್ತು ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಗಳ ಮೇಲೆ ಆಧಾರ ರಹಿತ ಆರೋಪ ಮಾಡಿರುವುದು ಹಾಸ್ಯಾಸ್ಪದವಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರೇತರ ಸಂಘಟನೆ ಸಂಘ ಪರಿವಾರ ಎಂದು ಅವರು ಹೇಳಿಕೊಂಡಿದ್ದಾರೆ. ಗಡಿಕಾಯುವ ಸೈನಿಕರಂತೆ ದೇಶ ಕಾಯುತ್ತೇವೆ ಎಂದು ಹೇಳುತ್ತಿದ್ದಾರೆ.
ಅಖಂಡ ಹಿಂದೂ ರಾಷ್ಟ್ರದ ಹೆಸರಿನಲ್ಲಿ ದೇಶವನ್ನು ಒಡೆಯುವುದೇ ಗುರಿಯಾಗಿಟ್ಟುಕೊಂಡ ಸಂಘ ಪರಿವಾರದ ಅಂಗ ಸಂಘಟನೆಗಳಿಗೆ ದೇಶ ಕಟ್ಟುವ ಪ್ರಗತಿಪರ ಸಂಘಟನೆಗಳ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ. ಉತ್ತರಾಖಂಡದಲ್ಲಿ ಸಾವಿರಾರು ಜನ ಕಾಣೆಯಾಗಿದ್ದು ಮತ್ತು ಸಾವಿರಾರು ಹೆಣಗಳ ರಾಶಿ ಬಿದ್ದಿದ್ದೂ, ಈಗಿನವರೆಗೂ ಅಂತ್ಯ ಸಂಸ್ಕಾರ ಮಾಡಲಾಗುತ್ತಿಲ್ಲ. ಅಲ್ಲಿ ಕೆಲಸ ಮಾಡದ ಈ ನಕಲಿ ದೇಶಭಕ್ತ ಸೈನಿಕರು ಕೇದರನಾಥ್ ದೇವಸ್ಥಾನ ಯಥಾಸ್ಥಿತಿಗೆ ತರಲು ಹೊರಟಿರುವುದು ಇವರ ದೇಶ ಭಕ್ತಿಯಾಗಿದೆ. 
ಪ್ರಗತಿಪರರ ತ್ಯಾಗಗಳಿಂದ ದೇಶ ಜಾಗತೀಕ ಬಂಡವಾಳ ಶಾಹಿಗಳ ಕೈ ಸೇರದೇ, ಕಾರ್ಮಿಕರು, ಸಣ್ಣ ರೈತರು ಮತ್ತು ಬೀದಿ ಬದಿಯ ವ್ಯಾಪಾರಿಗಳು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. 
ಹಿಂದೂ ಮೂಲಭೂತವಾದಿಗಳು ಪ್ರಗತಿಪರರನ್ನು ವಿಮರ್ಶೆ ಮಾಡುವಲ್ಲಿ ಕಾಲ ಕಳೆಯದೆ, ಜಾಗತೀಕ ಬಂಡವಾಳ ದಾಳಿಯನ್ನು ಎದುರಿಸಿ ಹೋರಾಡಿ ತಮ್ಮ ದೇಶ ಭಕ್ತಿಯನ್ನು ತೋರಿಸಲಿ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.     

Leave a Reply