ಜಿಲ್ಲೆಯಲ್ಲಿ ತೋಟಗಾರಿಕ ಸಪ್ತಾಹ ಆಚರಣೆ

  ಇದೇ ಆಗಸ್ಟ್ ತಿಂಗಳಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆ. ೧೫ ರವರೆಗೆ ತೋಟಗಾರಿಕಾ ಸಪ್ತಾಯ ಆಚರಣೆ ಮಾಡಲಾಗುತ್ತಿದೆ.  
  ಕಳೆದ ೨೦೧೨ನೇ ವರ್ಷವನ್ನು ತೋಟಗಾರಿಕೆ ವರ್ಷವೆಂದು ಆಚರಿಸಲಾಯಿತು. ಇದರಿಂದ ಕೊಪ್ಪಳ ಜಿಲ್ಲೆಯಲ್ಲಿಯೂ ತೋಟಗಾರಿಕೆ ಬೆಳೆಗಳ ಸರ್ವಾಂಗೀಣ ಅಭಿವೃದ್ದಿ ಆಗುತ್ತಲಿವೆ. ಪ್ರಸಕ್ತ ಸಾಲಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ತೋಟಗಾರಿಕೆ ಇಲಾಖೆಯಿಂದ ಮುಂದುವರೆದಿದ್ದು ಮತ್ತಷ್ಟು ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ.  ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಿಲ್ಲೆಯಾದ್ಯಂತ ೧೭೫೦೦ ಸಣ್ಣ ಮತ್ತು ಅತೀ ಸಣ್ಣ ಹಾಗೂ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ರೈತ ಫಲಾನುಭವಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.  ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಕಲ್ಲತಾವರಗೇರಾ ಗ್ರಾಮದಲ್ಲಿ  ಈ ಯೋಜನೆಗೆ ಚಾಲನೆ ನೀಡಿದ್ದಾರೆ.  ೩೨ ಲಕ್ಷಕ್ಕೂ ಹೆಚ್ಚು, ತೋಟಗಾರಿಕೆ ಗಿಡಗಳನ್ನು ಜಿಲ್ಲೆಯಲ್ಲಿ ನೆಡಲು ಯೋಜಿಸಲಾಗಿದೆ. ಕೊಪ್ಪಳ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದಲೂ ಈ ಕಾರ್ಯಕ್ರಮ ತ್ವರಿತಗತಿಯಲ್ಲಿ ಸಾಗುತ್ತಿದೆ.
  ತೋಟಗಾರಿಕೆ ಇಲಾಖೆಯ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತೀ ಉತ್ಸಾಹದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ರೈತರು ಆರ್ಥಿಕ ಅಭಿವೃದ್ದಿಯತ್ತ ದಾಪುಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯಾಗಿ ಇಲಾಖೆಯಿಂದ ಅತೀ ವ್ಯಾಪಕವಾಗಿ ತೋಟಗಾರಿಕೆ ಬೆಳೆಗಳ ಸರ್ವತೋಮುಖ ಅಭಿವೃದ್ದಿ ಆಗುತ್ತಲಿದೆ.  ಅಲ್ಲದೇ ತೋಟಗಾರಿಕೆ ಪಿತಾಮಹ ದಿ|| ಡಾ|| ಮರಗೌಡರ ಜನ್ಮ ದಿನವನ್ನು ಆ.೦೮ ರಂದು ಆಚರಿಸಲಾಗುತ್ತಿದ್ದು, ಆ.೦೮ ರಿಂದ ಆ.೧೫ ರವರೆಗೂ ತೋಟಗಾರಿಕೆ ಸಪ್ತಾಹವನ್ನು ಆಚರಿಸಲಾಗುತ್ತಿದೆ.  ಈ ಸಪ್ತಾಹದಲ್ಲಿ ಜಿಲ್ಲೆಯ ಎಲ್ಲಾ ಆಸಕ್ತ ರೈತರಲ್ಲದೇ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಎಲ್ಲ ನಾಗರಿಕರು ತೋಟಗಾರಿಕೆ ಬೆಳೆಗಳ ಬಗ್ಗೆ, ಮಾಹಿತಿ ಪಡೆಯಲು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅಥವಾ ಕೊಪ್ಪಳದಲ್ಲಿರುವ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.  ಆಸಕ್ತರು ನವೀನ ಉದ್ಯಾನಗಳ ವಿನ್ಯಾಸ, ಕೈ ತೋಟ, ತಾರಸಿ ಮೇಲಿನ ತೋಟಗಳ ಬಗ್ಗೆ ಅಷ್ಟೇ ಅಲ್ಲದೇ ಹಣ್ಣ ಮತ್ತು ತರಕಾರಿಗಳ ಶೇಖರಣೆ ಮತ್ತು ಸಂಸ್ಕರಣೆ ವಿಧಾನಗಳು, ಪೋಷಕಾಂಶಗಳ ಕೊರತೆ ನೀಗಿಸುವಲ್ಲಿ ತೋಟಗಾರಿಕೆ ಬೆಳೆಗಳ ಪಾತ್ರ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು  ತಿಳಿಸಿದೆ.

Leave a Reply