ಕಾವ್ಯ ಸಮೂಹ ಬೆಳೆಸುವುದು ಒಳ್ಳೆಯ ಸಂಸ್ಕೃತಿ ಬೆಳೆಸಿದಂತೆ


ಕೊಪ್ಪಳ : ಕವಿತೆ ತನ್ನ ಕೈಗೆತ್ತಿಕೊಂಡವರ ಕೂಸು. ಅದು ಬೆಳೆಯುತ್ತಲೇ ಹೋಗುತ್ತದೆ. ಒಂದು ಪ್ರದೇಶವನ್ನು ಗುರುತಿಸುವುದು ಅದರ ಸಂಸ್ಕೃತಿ ಮತ್ತು ಸಾಹಿತ್ಯದಿಂದ. ಹೀಗಾಗಿ ಕಾವ್ಯ ಸಮೂಹ ಬೆಳೆಸುವುದೆಂದರೆ ಒಳ್ಳೆಯ ಸಂಸ್ಕೃತಿ ಬೆಳೆಸಿದಂತೆ ಸಾಹಿತ್ಯ ಯಾವುತ್ತೂ ಒಳ್ಳೆಯ ಜನಾಂಗವನ್ನು ಕಟ್ಟುತ್ತಾ ಹೋಗುತ್ತದೆ. ಕವಿ ತನ್ನ ಅನುಭವನ್ನು ಘನಿಕರಿಸಿಕೊಳ್ಳುತ್ತಾ ಹೋಗಬೇಕು. ಅದನ್ನು ಸೂಕ್ತವಾಗಿ ಅಭಿವ್ಯಕ್ತಗೊಳಿಸಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ೬೨ನೇ ಕವಿಸಮಯದಲ್ಲಿ ಭಾಗವಹಿಸಿ ಕವನಗಳ ವಿಶ್ಲೇಷಣೆ ಮಾಡುತ್ತ, ಕವಿಗಳಿಗೆ ಕಿವಿಮಾತು ಹೇಳುತ್ತಿದ್ದರು.
ಈ ಸಲದ ಕವಿಸಮಯವನ್ನು ಕನಕಗಿರಿಯ ಅಲ್ಲಾಗಿರಿರಾಜ್‌ರ ಸಮೀರ್ ಸದನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಕನಕಗಿರಿಯ ಹಲವಾರು ಕವಿಗಳು,ಕವಿಯತ್ರಿಯರು ಭಾಗವಹಿಸಿದ್ದರು. ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ವಿ.ಬಿ.ರಡ್ಡೇರ್- ಧರ್ಮಗಳು ಏಕೆ ಬೇಕು?, ವಿಠ್ಠಪ್ಪ ಗೋರಂಟ್ಲಿ- ಕಡಲ ಕವಿತೆಗಳು, ಶಾಂತೇಶ ಬಡಿಗೇರ- ಮುಂಗಾರು ಮಳೆ, ಎನ್.ಜಡೆಯಪ್ಪ – ತುಂಗೆಯ ತೀರದಲ್ಲಿ, ಮನೋಹರ ಬೋಂದಾಡೆ- ಪಿತೃದೇವೋಭವ, ಸಿರಾಜ್ ಬಿಸರಳ್ಳಿ-ಪ್ರೀತಿ, ಅಯ್ಯಪ್ಪ ಬಡಿಗೇರ – ಕಾಮ, ಮೆಹಬೂಬಿ- ನಿಜಾಮನ ಬಂದೂಕು ಸದ್ದು ಮಾಡಿತು, ಮರೆತು ಬಿಡು, ಚತ್ರಪ್ಪ- ನಿನ್ನದ ಬರಿ ಜಂಭ, ಈಶ್ವರ ಹಲಗಿ-ಕರಳಧ್ವನಿ, ದುರ್ಗಾದಾಸ ಯಾದವ- ಕನಕಗಿರಿನಾಥ, ಕನಕಪ್ಪ ದಂಡಿನ- ರಾಮರಾಜ್ಯದ ಕನಸು, ಮೆಹಮೂದಮಿಯಾ- ತುಂಬು ಯೌವ್ವನ, ಬಿಲ್ಕೇಶ್ ಕನಕಗಿರಿ- ಕನಸುಗಳು, ಕವನಗಳನ್ನು ವಾಚನ ಮಾಡಿದರು. ಡಾ.ವಿ.ಬಿ.ರಡ್ಡೇರ್, ದುರ್ಗಾದಾಸ ಯಾದವ್, ಚಿದಾನಂದ ಮೇಟಿ,ಶೈಲಾ ಮೇಟಿ ಮಾತನಾಡಿದರು.
ಅಲ್ಲಾಗಿರಿರಾಜ್ ಸ್ವಾಗತ ಕೋರಿದರು. ಶೈಲಾಬಾಬು, ಜ್ಯೋತಿ, ಶಂಕರಪ್ಪ ಬಡಿಗೇರ, ಚತ್ರಪ್ಪ, ಕಲ್ಲೇಶ್ ಸಜ್ಜನವರ, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
Please follow and like us:
error