ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ,೨೦, ಕ್ಷೇತ್ರದ ಲೇಬಗೇರಾ, ಅಳವಂಡಿ, ಹಾಗೂ ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ ಮಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹಿಂದಿನ ಬಿಜೆಪಿ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯ ಅನುಧಾನ ಬಿಡುಗಡೆ ಮಾಡದೆ ನಾವು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರು ಈ ೩೦ ತಿಂಗಳುಗಳಲ್ಲಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ
ಸಿದ್ದರಾಮಯ್ಯನವರು ಸುಮಾರು ೫೦೦ ಕೋಟಿ ಹಣವನ್ನು ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗೆ
ಮಂಜೂರು ಮಾಡಿದ್ದಾರೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಪಕ್ಷದದಿಂದ ಮಾತ್ರ
ಸಾದ್ಯ. ಅತ್ಯಂತ ಸರಳ ಸಜ್ಜನ ರಾಜಕಾರಣಿಯಾದ ಬಸವರಾಜ ಪಾಟೀಲ ಇಟಗಿಯವರನ್ನು ತಾವು
ಬೆಂಬಲಿಸಿದರೆ ಎರಡು ಜಿಲ್ಲೆಗಳ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. ರಾಜಕೀಯ ಅನುಭವ
ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿಯು ತಮ್ಮ ಅವದಿಯಲ್ಲಿ ಅನೇಕ ನೀರಾವರಿ ಯೋಜನೆಗಳಿಗೆ
ಹೆಚ್ಚು ಒತ್ತುಕೊಟ್ಟು ಕಾರ್ಯನಿರ್ವಹಿಸಿದ್ದಾರೆ. ಸ್ಥಳಿಯ ಚುನಾಯಿತ ಪ್ರತಿನಿಧಿಗಳು
ಬಿಜೆಪಿಯ ವ್ಯಾಪಾರಿ ಅಭ್ಯರ್ಥಿಯನ್ನು ತಿರಸ್ಕರಿಸಿ ಅವರ ಯಾವುದೇ ಆಮಿಷ್ಯಕ್ಕೆ ಒಳಗಾಗದೆ
ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ
ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಪಕ್ಷದ ಮುಖಂಡರಾದ ಎಸ್.ಬಿ.ನಾಗರಳ್ಳಿ,
ಜುಲ್ಲು ಖಾದರಿ, ಹೆಚ್.ಎಲ್.ಹಿರೇಗೌಡ್ರು, ಈಶಪ್ಪ ಮಾದಿನೂರು, ಸುರೇಶಬುಮರೆಡ್ಡಿ,
ಬೀಮಣ್ಣ ಇಟಗಿ, ಕೆ.ಎಮ್.ಎಫ್.ಅಧ್ಯಕ್ಷರಾದ ವೆಂಕನಗೌಡ್ರು, ಬಸವರೆಡ್ಡೆಪ್ಪ ಹಳ್ಳಿಕೇರಿ,
ಹನುಮರೆಡಿ ಹಂಗನಕಟ್ಟಿ, ಶಿವಣ್ಣ ಹಂದ್ರಾಳ, ಕೃಷ್ಣ ಗಲಬಿ, ಹಟ್ಟಿ ಭರಮಪ್ಪ, ಪ್ರಸನ್ನಾ
ಗಡಾದ, ಅಮರೇಶ ಉಪಲಾಪೂರ, ಗಾಳೆಪ್ಪ ಪೂಜಾರ, ಯಮನೂರಪ್ಪ ನಾಯಕ್, ಕೇಶವ ರೆಡ್ಡಿ, ಅಪ್ಸರ
ಸಾಬ್ ಅತ್ತಾರ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error