ಸಿದ್ದಯ್ಯ ಪುರಾಣಿಕ ಪುತ್ಥಳಿಗೆ ಗೌರಾರ್ಪಣೆ

ಕೊಪ್ಪಳ ದಿ; ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಪ್ರತಿವರ್ಷದಂತೆ ನಡೆಯುವ ಕೊಪ್ಪಳ ಉತ್ಸವದ ಪ್ರಯುಕ್ತ ಶನಿವಾರದಂದು ಬೆಳಿಗ್ಗೆ ನಗರಸಭೆ ಉದ್ಯನವನದಲ್ಲಿರುವ ಡಾ.ಸಿದ್ದಯ್ಯ ಪುರಾಣಿಕ ಅವರ ಪುತ್ಥಳಿಗೆ ಸ್ಥಳೀಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸುರೇಶ ದೇಸಾಯಿಯವರು ಜಂಟಿಯಾಗಿ ಮಾಲಾರ್ಪಣೆ ಮಾಡುವದರ ಮೂಲಕ ಗೌರಾರ್ಪಣೆ ಮಾಡಿ ಜಿಲ್ಲಾ ಉತ್ಸವ ಆಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದ ಸರ್ವಾಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸುವುದಾಗಿ ತಿಳಿಸಿದ ಅವರು ೧೯೯೭ ಆಗಸ್ಟ್ ೨೪ ರಂದು ಕೊಪ್ಪಳ ಜಿಲ್ಲೆಯಾಗಿ ರಚನೆ ಗೊಂಡಿದ್ದು ಅದರ ಸವಿನೆನಪಿಗಾಗಿ ಕಳೆದ ೭ ವರ್ಷಗಳಿಂದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಪ್ರತಿ ವರ್ಷ ಜಿಲ್ಲಾ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವುದ ಮೂಲಕ ಜಿಲ್ಲೆ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆಯಲು ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಾಗಿದೆ ಎಂದು ಶಾಸಕರು ಹೇಳಿದರು.
ಸುರೇಶ ದೇಸಾಯಿ ಅವರು ಮಾತನಾಡಿ ನಗರದ ಹೆದ್ದಾರಿ ೬೩ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದಬೇಕು ನಡೆಯುತ್ತಿರುವ ಕಾಮಗಾರಿ ಬೇಗನೆ ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಅಪೂರ್ಣ ಕೆಲಸಗಳನ್ನು ಆದಷ್ಟು ಬೇಗನೆ ಪೂರ್ಣ ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಸಾಹಿತಿ ಮಹಾಂತೇಶ್ ಮಲ್ಲನಗೌಡರ, ನಗರಸಭೆ ಸದಸ್ಯರಾದ ಶ್ರೀಮತಿ ವಿಜಯಾ ಎಸ್.ಹಿರೇಮಠ, ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ, ಜಿ.ಪಂ. ಮಾಜಿ ಸದಸ್ಯ ಪ್ರಸನ್ ಗಡಾದ್ ಕಾರ್ಯಕ್ರಮ ಸಂಘಟಕ ಮಹೇಶ ಬಾಬು ಸುರ್ವೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ ಅಲಿ, ನಾಗರಾಜ್ ಸುಣಗಾರ, ಪ್ರದಾನ ಕಾರ್ಯದರ್ಶಿ ಹನುಮಂತ ಹಳ್ಳಕೇರಿ, ಹರೀಶ ಹೆಚ್.ಎಸ್. ಪರಮಾನಂದ ಯಾಳಗಿ, ಎನ್.ಎಂ.ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment