ಕೊಪ್ಪಳ-ರಾಯಚೂರು ಕ್ರೀಕೆಟ್ ತಂಡಕ್ಕೆ ಆಯ್ಕೆಗೊಂಡ ಕೊಪ್ಪಳದ ಕ್ರೀಡಾಪಟುಗಳು

 ಕೆಎಸ್‌ಸಿಎ ರಾಯಚೂರು ವಲಯದ ಸಿಂಧನೂರಿನಲ್ಲಿ ನಡೆದ ಕೊಪ್ಪಳ-ರಾಯಚೂರು ಜಿಲ್ಲಾ ತಂಡದ ೧೪ ಮತ್ತು ೧೯ ವರ್ಷದ ಕ್ರಿಕೇಟ್ ಕ್ರೀಡಾಪಟುಗಳ ಆಯ್ಕೆ ಟ್ರಾಯಲ್ಸ್ ನಡೆಯಿತು. ಇದರಲ್ಲಿ ೧೪ ವರ್ಷದೊಳಗಿನ ಕ್ರೀಡಾಪಟು ಕೊಪ್ಪಳದ ನಿಹಾಲ ಪಾಟೀಲ್, ಮನಿಕಂಠ ಹಾಗೂ ೧೯ ವರ್ಷದ ಕ್ರೀಡಾಪಟು ಜುಲ್‌ಫಿಖಾರ ಪೈಮಾಶಿ ಆಯ್ಕೆಯಾಗಿದ್ದಾರೆ.
ಏ.೨೩ ರಿಂದ ಏ.೩೦ ರವರೆಗೆ ಕ್ರೀಡಾ ತರಬೇತಿ ಸ್ಪರ್ಧೆ ನಡೆಯಲಿದ್ದು, ಅದರಲ್ಲಿ ಕೊಪ್ಪಳ-ರಾಯಚೂರು ಜಿಲ್ಲೆ, ವಿಜಾಪುರ-ಬಾಗಲಕೋಟೆ ಹಾಗೂ ಬೀದರ-ಗುಲಬರ್ಗಾ ಜಿಲ್ಲೆಗಳ ನಡುವೆ ಬೀದರನ ನೆಹರು ಕ್ರೀಡಾಂಗಣದಲ್ಲಿ ಲೀಗ್ ಪಂದ್ಯಾವಳಿ ನಡೆಯಲಿದೆ ಎಂದು ಕೊಪ್ಪಳ ಕ್ರಿಕೆಟ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿಗಳಾದ ಅಮ್ಜದ್ ಪಾಷಾ ದಾಗದಾರ ಮತ್ತು ಜಾಕೀರ ಹುಸೇನ ಸಾಲಗುಂದಿ    ತಿಳಿಸಿದ್ದಾರೆ.
Please follow and like us:

Leave a Reply