fbpx

ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ

 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ೨೦೧೪ನೇ ಸಾಲಿನ ಸದಸ್ಯತ್ವ ಪಡೆಯಲು ಮತ್ತು ಸದಸ್ಯತ್ವದ ನವೀಕರಣಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
ಕೊಪ್ಪಳ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಮ್ಮ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳತಕ್ಕದು, ಹಾಗೂ ಹೊಸದಾಗಿ ಸಂಘದ ಸದಸ್ಯತ್ವ ಪಡೆಯಲಿಚ್ಚಿಸುವ ಕಾರ್ಯನಿರತ ಪತ್ರಕರ್ತರು ಜನೇವರಿ ೮, ೨೦೧೪ ತಮ್ಮ ಸ್ವವಿವರದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಿ.ಎಸ್ ಗೋನಾಳ, ಪ್ರಧಾನ ಕಾರ್ಯದರ್ಶಿ ಎಂ. ಸಾದಿಕ ಅಲಿಯವರಿಗೆ ಸಂಪರ್ಕಿಸಬಹುದು. 
ಸಂಘ ನಿಗದಿ ಪಡಿಸಿದ ಶುಲ್ಕದೊಂದಿಗೆ ೨ ಭಾವ ಚಿತ್ರ ಹಾಗೂ ಹಿಂದಿನ ಗುರುತಿನ ಚೀಟಿ ಅಥವಾ ನೇಮಕಾತಿ ಪತ್ರದ ಝರಕ್ಸ್ ಪ್ರತಿಯೊಂದಿಗೆ ಜನೇವರಿ ೮, ೨೦೧೪ರ ಒಳಗಾಗಿ ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೪೪೮೦೨೫೦೬೭,೯೪೪೯೧೫೪೦೨೮, ಜಿಲ್ಲಾ ಸಮಿತಿ ಪಡೆಯಲು ಸಂಪರ್ಕಿಸಬಹುದು.
Please follow and like us:
error

Leave a Reply

error: Content is protected !!