ಕೊಲೆ ಆರೋಪಿಗೆ ೧೪ ವರ್ಷ ಕಾರಾಗೃಹ ಶಿಕ್ಷೆ

ಕೊಪ್ಪಳ ನ. : ಯಲಬುರ್ಗಾ ತಾಲೂಕು ಚಿಕ್ಕಮನ್ನಾಪುರ ಗ್ರಾಮದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಜೋಡಿ ಕೊಲೆ ಆರೋಪಿ ಹಂಪಣ್ಣ ತಂದೆ ರಾಚಪ್ಪ ಕಮ್ಮಾರ ಎಂಬಾತನಿಗೆ ೧೪ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಕೊಪ್ಪಳದ ಎರಡನೆ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
  ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮನ್ನಾಪೂರ ಗ್ರಾಮದ ಹಂಪಣ್ಣ ತಂದೆ ರಾಚಪ್ಪ ಕಮ್ಮಾರ ಎಂಬುವವರ ಹೆಂಡತಿ ಜಯಮ್ಮ, ಯಮನೂರಪ್ಪ ಕರಡಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕಳೆದ ಮೇ ೨೨ ರಂದು ರಾತ್ರಿ ಇವರಿಬ್ಬರೂ ಜೊತೆಯಲ್ಲಿರುವುದನ್ನು ಕಂಡ ಹಂಪಣ್ಣ ತನ್ನ ಹೆಂಡತಿ ಹಾಗೂ ಯಮನೂರಪ್ಪ ಕರಡಿ ಇವರಿಬ್ಬರ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು.
  ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳದ ೨ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಗಿ ಅವರು ಆರೋಪಿ ಹಂಪಣ್ಣ ಅವರ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ    ಆರೋಪಿಗೆ ೧೪ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. ೫೦೦೦ ಗಳ ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಭರಿಸಲು ತಪ್ಪಿದಲ್ಲಿ ೬ ತಿಂಗಳ ಸಾದಾ ಶಿಕ್ಷೆಯನ್ನು ಆರೋಪಿ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.  ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
koppal

Related posts

Leave a Comment