ಧಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಮಂಜುನಾಥ ಕಲ್ಲನವರ ದ್ವೀತಿಯ ಸ್ಥಾನ.

ಕೊಪ್ಪಳ-30- ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ  ಧಕ್ಷಿಣ ಭಾರತದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಮಂಜುನಾಥ ಕಲ್ಲನವರ,  ಕುಮಟೆ (ಫೈಟ್) ೨೧ ರಿಂದ ೨೫ ಕೆಜಿ ವಿಭಾಗದಲ್ಲಿ ನಡೆದ ಸ್ಪರ್ಧೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.  ವಿಕಾಸ ಮಾಲಿಪಾಟೀಲ, ತಿರುಮಲೇಶ ಕಲ್ಲಣ್ಣವರ, ಪಲ್ಲವಿ ಹಡಪದ, ಅನನ್ಯ ಮಾದಿನೂರ, ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗ್ರಾಮದ ಮುಖಂಡರಾದ ಗ್ರಾ. ಪಂ ಅಧ್ಯಕೆ ಮಂಜುಳಾ ಆರ್. ಹೂಗಾರ, ಉಪಾಧ್ಯಕ್ಷೆ ಹುಲಿಗೆಮ್ಮ ಎಸ್ ಭಜೆಂತ್ರಿ, ಸದಸ್ಯ ಭಿಮನಗೌಡ ಮಾಲಿಪಾಟೀಲ, ಸ್ವಾತಂತ್ರ ಹೋರಾಟಗಾರ ಯಲ್ಲಪ್ಪ ಮಾದಿನೂರ, ಯಂಕಣ್ಣ ಕೊಳ್ಳಿ, ನಿಂಗಪ್ಪ ಯತ್ನಟ್ಟಿ, ತರಭೇತುದಾರ ರಮೇಶ ಜಿ. ಭಜೆಂತ್ರಿ, ಧನ್ಯಕುಮಾರ ದಸ್ತೆನ್ನವರ ಇನ್ನಿತರರು ಪ್ರಶಸ್ತಿ ವಿಜೇತ ಸ್ಪರ್ಧಾಳುಗಳಿಗೆ  ಶುಭ ಹಾರೈಸಿದರು.

Related posts

Leave a Comment