ಬಹಿರಂಗ ಪ್ರಚಾರ ಅಂತ್ಯ : ಕೇಬಲ್ ಟಿ.ವಿ.ಗಳಲ್ಲಿ ಪ್ರಚಾರಕ್ಕೆ ನಿರ್ಬಂಧ

 ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ೦೫ ಗಂಟೆಗೆ ಅಂತ್ಯಗೊಂಡಿದ್ದು, ಈ ಅವಧಿಯ ನಂತರ ಕೇಬಲ್ ಟಿ.ವಿ. ಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಜಾಹೀರಾತು, ಸಂದರ್ಶನ ಅಥವಾ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ.
  ಚುನಾವಣಾ ಆಯೋಗದ ಸೂಚನೆಯಂತೆ ಬಹಿರಂಗ ಪ್ರಚಾರ ಅಂತ್ಯದ ನಂತರ ಯಾವುದೇ ಕೇಬಲ್ ನೆಟ್‌ವರ್ಕ್ ಗಳ ಮೂಲಕ ಯಾವುದೇ ಬಗೆಯ ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಜಾಹೀರಾತು, ಸಂದರ್ಶನ ಅಥವಾ ಸಮೀಕ್ಷೆ, ಭಾಷಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ.  ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂತಹ ಕೇಬಲ್ ನೆಟ್‌ವರ್ಕ್‌ನವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ.

Leave a Reply