ಶ್ರೀಗವಿಮಠಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸಧಾನ್ಯಗಳ ಮಹಾಪುರ
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಮಹಾದಾಸೋಹಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ಕೊಪ್ಪಳ ನಗರದಿಂದ ಶ್ರೀಮಠಕ್ಕೆ ದವಸಧಾನ್ಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂದು ಕುಣಿಕೇರಿ ತಾಂಡಾದಿಂದ ೧೭ ಪಾಕೇಟ್ ಮೆಕ್ಕೆಜೋಳ, ೭ ಚೀಲ ಜೋಳ, ಕನಕಾಪುರ ತಾಂಡಾದಿಂದ ೮ ಚೀಲ ಮಕ್ಕೆಜೋಳ, ೩ ಪಾಕೆಟ್ ಅಕ್ಕಿ, ಲಿಂಗದಳ್ಳಿಂದ ೫ ಚೀಲ ನೆಲ್ಲು, ೫ ಚೀಲ ಜೋಳ, ಅರೀಕೇರಿಂದ ೫೦ ಕೆ.ಜಿ.ನೆಲ್ಲು, ೨೫ ಕೆ.ಜಿ. ಅಕ್ಕಡಿ ಕಾಳು, ಗಿಣಿಗೇರಿಂದ ೧೫ ಪಾಕೇಟ್ ನೆಲ್ಲು, ೩ ಪಾಕೇಟ್ ಮೆಕ್ಕೆ ಜೋಳ, ತಳಕಲ್‌ದಿಂದ ಶಿವಪ್ಪ ಆದಾಪುರ ಇವರಿಂದ ೨ ಪಾಕೇಟ ಉಳ್ಳಾಗಡ್ಡಿ, ೧ ಚೀಲ ಮೆಕ್ಕೆಜೋಳ, ಲೇಬಗೇರಿಯ ಬಸಣ್ಣ ನಂದಿಬೇವುರ ಇವರಿಂದ ೪೫ ಕುಂಬಳಕಾ, ತಳಕಲ್‌ದ ಶಿವಣ್ಣ ಸೋಮಾಪುರ ಇವರಿಂದ ೫೦ ಕೆ.ಜಿ.ಉಳ್ಳಾಗಡ್ಡಿ, ಟಣಕಣಕಲ್ಲಿನಿಂದ ಆಟೋಗಾಡಿ ರೊಟ್ಟಿ, ೧೦ ಚೀಲ ಮೆಕ್ಕೆ ಜೋಳ, ನೆಲ್ಲು, ಸಜ್ಜೆ, ಮಂಗಳೂರ ಗ್ರಾಮದಿಂದ ೧೧,೦೦೦ ರೊಟ್ಟಿ, ೨೫ ಚೀಲ ದವಸಧಾನ್ಯ, ೨೦೦ ಕುಂಬಳಕಾ, ಹುಲಗಿ ಗ್ರಾಮದಿಂದ ೧ ಟ್ರ್ಯಾಕ್ಟರ್ ರೊಟ್ಟಿ, ಕಾಸನಕಂಡಿಂದ ೪೫ ಚೀಲ ನೆಲ್ಲು, ೫ ಚೀಲ ಮೆಕ್ಕೆಜೋಳ, ೧ ಚೀಲ ಸಜ್ಜಿ, ತಾಳಕನಕಾಪುರ ಗ್ರಾಮದಿಂದ ೨೦೦೦ ರೊಟ್ಟಿ, ೫೨ ಚೀಲ ದವಸಧಾನ್ಯ, ಹಿರೆ ಕಾಸನಕಂಡಿಂದ ೫ ಕ್ವಿಂಟಾಲ್ ಮೆಕ್ಕೆ ಜೋಳ, ೧ ಚೀಳ ಸಜ್ಜಿ, ೫೪ ಚೀಲ ನೆಲ್ಲು, ೩೦ ಕುಂಬಳಕಾ, ಕೋನಸಾಗರ ಗ್ರಾಮದಿಂದ ೧ ಟ್ರ್ಯಾಕ್ಟರ್ ಕಟ್ಟಿಗೆ, ೧ ಚೀಲ ನೆಲ್ಲು ಈ ಮೊದಲಾದ ದವಸ ಧಾನ್ಯಗಳು ಶ್ರೀ ಗವಿಮಠದ ಜಾತ್ರೆಯ ನಿಮಿತ್ಯ ನೆಡೆಯುವ ಮಹಾದಾಸೋಹಕ್ಕೆ ಅರ್ಪಿತವಾದವು. ಸದ್ಬಕ್ತರಿಗೆ ಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳು ಶುಭಹಾರೈಸಿದ್ದಾರೆ.
Please follow and like us:

Related posts

Leave a Comment