ಜಾತಿ ಧರ್ಮಗಳ ಹೆಸರಲ್ಲಿ ಸಮಾಜ ವಿಘಟಿಸುತ್ತಿರುವುದು ಅಪಾಯಕಾರಿ- ಕುಂವಿ


ಸರಕಾರಿ ಶಾಲೆಗಳ ಮಕ್ಕಳಿಗೆ ಭಗವದ್ಗಿತೆಯನ್ನು ಬಲವಂತವಾಗಿ ಕಂಠಪಾಠ ಮಾಡಿಸುವದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಗಂಗಾವತಿಯಲ್ಲಿ ನಡೆದ ಎಂ.ಎಸ್.ಅನ್ಸಾರಿ ದ್ವೀತಿಯ ಸ್ಮರಣೋತ್ಸವ ಮತ್ತು ಇಕ್ಬಾಲ್ ಅನ್ಸಾರಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಜಾತ್ಯತೀತ ರಾಷ್ಟ್ರ ಎಂದು ಖ್ಯಾತಿ ಪಡೆದಿರುವ ಭಾರತದಲ್ಲಿ ಧರ್ಮ,ಜಾತಿ ಆಧಾರದಲ್ಲಿ ಸಮಾವನ್ನು ವಿಘಟಿಸುವ ಕೆಲಸ ನಡೆಯುತ್ತಿರುವುದು ಅಪಾಯಕಾರಿ ವಿಷಯ ಎಂದು ಆತಂಕ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಾಜಿ ಸಂಸದರಾದ ಎಚ್.ಜಿ.ರಾಮುಲು, ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ಎಚ್.ಆರ್.ಶ್ರೀನಾಥ, ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಜಿ, ಕೊಟ್ಟೂರು ಸ್ವಾಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error