ಆಶ್ರಯ ಕಾಲೋನಿಗೆ ಕುವೆಂಪು ನಗರ ನಾಮಕರಣ

ಕೊಪ್ಪಳ ನಗರದ ಹೊರವಲಯದಲ್ಲಿರುವ ಹೂವಿನಾಳ ರಸ್ತೆಯ ಆಶ್ರಯ ಕಾಲೋನಿಗೆ ಕುವೆಂಪು ನಗರ ಎಂದು ನಾಮಕರಣ ಮಾಡಲಾಯಿತು. ನಾಮಕರಣ ಕಾರ್‍ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡಿಸಲಾಯಿತು. ಕಾರ್‍ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಹನುಮಂತಪ್ಪ ಮ್ಯಾಗಳಮನಿ, ಮೈಲಪ್ಪ ಬಿಸರಳ್ಳಿ, ಸೈಯದ್ ಶಬ್ಬಾರ್ ಹುಸೇನ್ , ನಾಸೀರ್ ಕಂಠಿ,ಅಲಿ ಹಸನ್ ಜವಳಗೇರಾ, ಕಾಲೋನಿಯ ಪಂಚ ಕಮಿಟಿಯ ಅಧ್ಯಕ್ಷರಾದ ನಜೀರ್ ಅಹ್ಮದ್ ಕುಕನೂರು ಮತ್ತು ಕಾಲೋನಿಯ ಗುರುಹಿರಿಯರ ಭಾಗವಹಿಸಿದ್ದರು.

Leave a Reply