ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ

ಕೊಪ್ಪಳ :- ಬಾಲ ವಿಕಾಸ ಅಕಾಡಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೊಪ್ಪಳ  ಇವರ ಸಂಯುಕ್ತ ಆಶ್ರಯದಲ್ಲಿ  ಹತ್ತನೆ ತರಗತಿ  ವಿಧ್ಯಾರ್ಥಿಗಳಿಗೆ   ಪರಿಕ್ಷಾ  ಪೂರ್ವಸಿದ್ದತೆ   ಹಾಗೂ ಸಂವಾದ  ಕಾರ್ಯಕ್ರಮವನ್ನು   ಭಾಗ್ಯನಗರದ  ಖೋಡೆ   ಕಲ್ಯಾಣ ಮಂಟಪದಲ್ಲಿ  ಏರ್ಪಡಿಸಲಾಗಿತ್ತು.
ಸಂ.ಪ.ಪೂ ಕಾಲೇಜಿ ಭಾಗ್ಯನಗರ  ಸ.ಪ್ರೌ ಶಾಲೆ  ಹಲಗೇರಿ  ಹಾಗೂ  ವಿಧ್ಯಾ ವಿಕಾಸ  ಪ್ರೌಡ ಶಾಲೆ ಭಾಗ್ಯನಗರದ  ಸುಮಾರು ೨೬೦ ವಿಧ್ಯಾರ್ಥಿಗಳಿಗೆ  ವಿಷಯವಾರು  ಸಂವಾದ  ಹಾಗೂ ಪರೀಕ್ಷಾ   ಪೂರ್ವಸಿದ್ದತೆ   ಕುರಿತು   ಕಾರ್ಯಕ್ರಮ ಜರಗಿತು.  ಪ್ರಾಸ್ತಾವಿಕವಾಗಿ  ಸೋಮಶೇಖರ.ಚ. ಹರ್ತಿ ಶಿಕ್ಷಣ ಸಂಯೋಜಕರು ಮಾತನಾಡಿದರು  ಕಾರ್ಯಕ್ರಮವನ್ನು ಉದ್ಘಾಟಿಸಿದ  ಉಮೇಶ ಪೂಜಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಮಾತನಾಡಿ  ಓದಿನಲ್ಲಿ ವಿಧ್ಯಾರ್ಥಿಗಳು  ಶಿಸ್ತುನ್ನು ಅಳವಡಿಸಿಕೊಳ್ಳಬೇಕು  ಶಿಸ್ತಿಲ್ಲದ ಜೀವನ  ನಾವಿಕನಿಲ್ಲದ  ಹqಗಿನಂತೆ ವಿಧ್ಯಾರ್ಥಿಗಳು  ಏಕಾಗ್ರತೆ ಅಧ್ಯಯನದ ಕೆಲ ಸುತ್ರಗಳನ್ನು  ಮತ್ತು  ಜ್ಞಾನವನ್ನು  ನಿಮ್ಮದನ್ನಾಗಿಸಿಕೊಳ್ಳಲು   ಶಿಸ್ತು ಬದ್ದ ಕ್ರಮಗಳನ್ನು  ಅಳವಡಿಸಿಕೊಲ್ಳಬೇಕೆಂದು ವಿಧ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಓಲೆಕಾರವರು   ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ  ಸಾಂದರ್ಭಿಕವಾಗಿ ಮಾತನಾಡಿದರು ಶ್ರೀ ಯಂಕಪ್ಪ ಮುಖ್ಯ ಗುರುಗಳು  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು  ದೇವಪ್ಪ  ಬಚ್ಚಕನವರ  ಮುನಿರಾಬಾದ ಟಿ.ಬಿ.ಪಿ.  ಕನ್ನಡ ನಜಿರಅಮ್ಮದ ಚಿಲಕಮುಕಿ  ಗಣಿತ  ರೇವಣಸಿದ್ದಪ್ಪ ಚನ್ನಿನಾಯಕರ   ಕಿನ್ನಾಳ  ವಿಜ್ಞಾನ   ರಾಜೇಶ ಪೂಜಾರ  ಹುಲಗಿ ಸಮಾಜ ವಿಜ್ಞಾನ   ರೆಹಮುನ್ನಿಸಾಬೆಗಂ ಹೊರತಟ್ನಾಳ   ಇಂಗ್ಲೀಷ ವಿಷಯದ ಕುರಿತು ವಿಧ್ಯಾರ್ಥಿಗಳ ಜೊತೆ ಸಂವಾದ ನೆಡಸಿದರು ಪ್ರೋಜೆಕ್ಟರ್ ಹಾಗೂ   ಸಿ.ಡಿ.ಗಳನ್ನು ಬಳಸಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು    ವಂದಾಲ ಶಿಕ್ಷಕರು  ಸ್ವಾಗತಿಸಿದರು   ಅಂಬಾಸ್ ಶಿಕ್ಷಕರು  ನಿರೂಪಿಸಿ ವಂದಿಸಿದರು 
Please follow and like us:
error