ಮಧ್ಯಾಂತರ ಚುನಾವಣೆ !

 ಸಿಎಂ ಒಲವು :ಚುನಾವಣಾ ಆಯೋಗ ಚುನಾವಣೆ ನಡೆಸಿದರೆ ಅಭ್ಯಂತರವಿಲ್ಲ’
ಬೆಂಗಳೂರು, ಜೂ.17:ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾದರೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಧ್ಯಾಂತರ ಚುನಾವಣೆ ಎದುರಾಗುವ ಮುನ್ಸೂಚನೆಯನ್ನು ನೀಡಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಕರ್ನಾಟಕದಲ್ಲಿ ಅವಧಿಗೂ ಮುನ್ನ ಇತರ ರಾಜ್ಯಗಳಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ನಡೆಸಬೇಕೋ ಬೇಡವೋ ಎಂಬ ನಿರ್ಧಾರ ಆಯೋಗ ಕೈಗೊಳ್ಳಲಿದೆ ಎಂದರು.ಆಯೋಗದ ನಿರ್ಧಾರಕ್ಕೆ ತಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ.ಆಯೋಗದ ನಿರ್ಧಾರಕ್ಕೆ ತಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.ಸಂಪುಟ ವಿಸ್ತರಣೆಗೆ ಮುಂದಾದಾಗಲೆಲ್ಲ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇದೆ. ಇಲ್ಲದಿದ್ದರೆ ಈಗಗಾಲೇ ಸಂಪುಟ ವಿಸ್ತರಣೆಯ ಕಾರ್ಯ ನಡೆದುಹೋಗುತ್ತಿತ್ತು ಎಂದ ಅವರು,ಈಗ ರಾಷ್ಟ್ರಪತಿ ಚುವನಾವಣೆಗೆ ಸಿದ್ಧತೆ ನಡೆಯುತ್ತಿರುವುದರಿಂದ ವಿಳಂಬವಾಗಿದೆ.
ಮುಂದಿನ ಎರಡು ದಿನದೊಳಗೆ ದಿಲ್ಲಿಗೆ ತೆರಳಿ ಜೊತೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಸಂಪುಟ ವಿಸ್ತರಣೆ ಕಾರ್ಯಕ್ಕೆ ಅಡ್ಡಿಯಾಗುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಸಂಪುಟ ವಿಸ್ತರಣೆಗೆ ತಮಗೆ ಎಲ್ಲ ಕಾಲವೂ ಆಷಾಢವಿದ್ದಂತೆ. ತಾವು ಸಂಪುಟ ವಿಸ್ತರಣೆಗೆ ಮುಂದಾದಾಗೆಲ್ಲ ಅಡೆತಡೆಗಳು ಎದುರಾಗುತ್ತಲೇ ಇವೆ. ಆದುದರಿಂದ ತಮಗೆ ಎಲ್ಲ ಕಾಲವೂ ಆಷಾಢವಾಗಿದೆ ಎಂದರು.ಈ ಬಾರಿ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ.
ಮುಂದಿನ ಮೂರು ನಾಲ್ಕು ದಿನಗಳೊಳಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಕರಾವಳಿ, ಕೊಡಗು ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಇನ್ನೂ ಸ್ವಲ್ಪ ದಿನ ಕಾದು ನೋಡಿದ ಬಳಿಕ ಮೋಡ ಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.
ಶ್ರೀರಾಮುಲು ಹೊಸ ಪಕ್ಷ ಕಟ್ಟುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶ್ರೀರಾಮುಲು ಈಗಲೂ ಬಿಜೆಪಿಯೊಂದಿಗೇ ಇದ್ದಾರೆ. ಕೆಲವೊಂದು ಭಿನ್ನಾಭಿಪ್ರಾಯ, ಗೊಂದಲದಿಂದ ದೂರವಾಗಿದ್ದರು. ಅವರನ್ನು ಕೊನೆಯ ವರೆಗೂ ನಮ್ಮಪಕ್ಷದೊಂದಿಗೆ ಇರುವಂತೆ ಮನವೊಲಿಸಲಾಗುವುದು ಎಂದರು.
Please follow and like us:
error