ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ

ದಿನಾಂಕ :   ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯ ಅತ್ಯಂತ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ೮;೦೦ ಗಂಟೆಗೆ ಸಂಸ್ಥೆಯ ಅಧ್ಯಕ್ಷರು ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ನೆರವೆರಿತು ಧ್ವಜಾರೋಹಣ ಕಾರ್ಯಕ್ರಮದ ನಂತರ  ಶಾಲೆಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಕಾರ್ಯಕ್ರಮ ನೆರವೇರಿತು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾನಪ್ಪ ಜಿ.ಕೆ.ಯವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷೆಯಾದಂತಹ ಶ್ರೀಮತಿ ಲಕ್ಷ್ಮೀಬಾಯಿ ಬಾವಿಕಟ್ಟಿಯವರು ಇನ್ನೋರ್ವ ಅತಿಥಿಗಳಾಗಿ ಶ್ರೀನಿವಾಸ ಹ್ಯಾಟಿ ತಾ. ಪಂ ಸದಸ್ಯರು & ಲಕ್ಷ್ಮಣಸಾ ನಿರಂಜನರವರು ಆಗಮಿಸಿದ್ದರು ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್.ಕೆ.ಜಿ ಮಕ್ಕಳು ರಾಷ್ಟ್ರನಾಯಕರ ಪಾತ್ರಧಾರಿಯಾಗಿ ಕಾಣಿಸಿಕೊಂಡರು ೧ ರಿಂದ ೪ ನೇ ತರಗತಿಯ ಹಲವಾರು ವಿದ್ಯಾರ್ಥಿಗಳು  ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ನಾಯಕರ ಪಾತ್ರದಲ್ಲಿ ಕಾಣಿಸಿಕೊಂಡರು. ವಿಮೋಚನೆಯ ಕುರಿತು ಮಾತನಾಡಿದರು. ನಂತರ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ.ಜಿ.ಕೆ.ರವರು ಮಾತನಾಡಿ ನಮ್ಮ ಹಿಂದುಳಿದ ಭಾಗವದ ಹೈ.ಕರ್ನಾಟಕದ ಜನರು ಉತ್ತಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಹೊರಹೊಮ್ಮಬೇಕು ನಮ್ಮ ಸಂಸ್ಥೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಉತ್ತಮವಾದ ವೇದಿಕೆಯನ್ನು ಸಿದ್ಧಗೊಳಿಸುವ ಪ್ರಯತ್ನಸುತ್ತಿದೆ. ಉನ್ನತ ಗುಣಮಟ್ಟದ ಶಿಕ್ಷಣ ಕೊಡಿಸುವ ಗುರಿ ಸಂಸ್ಥೆ ಹೊಂದಿದೆ ಹೊಸ ಹೊಸ ತಂತ್ರ ವಿಧಾನಗಳನ್ನು ಬಳಸಿ ಮುಂದುವರೆದ ಪಟ್ಟಣಗಳಲ್ಲಿ ಸಿಗುವಂತಹ ಶಿಕ್ಷಣವನ್ನು ನಮ್ಮ ಶಾಲೆಯ ವಿಧ್ಯಾರ್ಥಿಗಳಿಗೆ ಕೊಡಿಸಲು ನಮ್ಮ ಸಂಸ್ಥೆ ಶ್ರಮಿಸುತ್ತದೆ ಎಂದರು. 
ಸಹ ಶಿಕ್ಷಕಿಯರಾದ ಚಾಮುಂಡಿ ಮೇಟಿ, ನಿರೂಪಿಸಿದರೆ, ಶ್ರೀಮತಿ ಪ್ರಭಾವತಿಧನಶೆಟ್ಟಿ ಸ್ವಾಗತಿಸಿದರು, ಮತ್ತು ಶ್ರೀಮತಿ ಲಲಿತಾ ಕಟ್ಟಿಮನಿ ವಂದಿಸಿದರು.  

Leave a Reply