You are here
Home > Koppal News > ಟೀಪ್ಪು ಸುಲ್ತಾನ್ ೨೬೩ ನೇ ಜಯಂತೋತ್ಸವದಲ್ಲಿ ಸನ್ಮಾನ

ಟೀಪ್ಪು ಸುಲ್ತಾನ್ ೨೬೩ ನೇ ಜಯಂತೋತ್ಸವದಲ್ಲಿ ಸನ್ಮಾನ

ಷೇರೆ ಏ ಮೈಸೂರ ಹಜರತ್ ಟೀಪ್ಪು ಸುಲ್ತಾನ್ ಎಜ್ಯೂಕೇಷನ್  ಅಂಡ್ಯ್ ವೆಲ್ ಫೇರ್ ಸೊಸೈಟಿ (ರಿ) ಕೊಪ್ಪಳ ಜಿಲ್ಲೆ ಇವರು ನಗರದ ಸಾಹಿತ್ಯ ಭವನದಲ್ಲಿ ಷೇರೆ ಏ ಮೈಸೂರ ಹಜರತ್ ಟೀಪ್ಪು ಸುಲ್ತಾನ್ ರವರ ೨೬೩ ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳದ ಅಂತರಾಷ್ಟ್ರೀಯ ಕರಾಟೆ ಪಟುಗಳಾದ ಮೌನೇಶ ಮತ್ತು ಸೈಯದ್ ಹೂಗಾರ ಇವರು ಕಳೆದ ವರ್ಷ ಶ್ರೀಲಂಕಾ ರಾಷ್ಟ್ರದ ಕೊಲಂಬೊದ ರಾಜದಾನಿಯಾದ ಬಡ್ಡೆಗಾಮದಲ್ಲಿ ಅಂತರಾಷ್ಟ್ರೀಯ ಕರಾಟೆ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾಗಿ ನಮ್ಮ ನಾಡಿಗೆ ಕೀರ್ತಿ ತಂದಿದ್ದಕ್ಕಾಗಿ ಸೊಸೈಟಿಯ ಪರವಾಗಿ ಶಾಸಕರಾದ ಸಂಗಣ್ಣ ಕರಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಭೂಮರಡ್ಡಿ ಮತ್ತು ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಎಸ್. ಬಿ. ಖಾದ್ರಿ ಮತ್ತು ಜಿ.ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಲ ಬಿಎಸ್‌ಆರ್ ಮುಖಂಡರಾದ ಕೆ.ಎಂ. ಸೈಯದ್ ಮತ್ತು ನಗರ ಸಭೆ ಸದಸ್ಯರಾದ ಮೆಹಬೂಬ್ ನಾಲಬಂದ, ಕಾಟನ್ ಪಾಷಾ, ಹಾಗೂ ಸೊಸೈಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು. 

Leave a Reply

Top