ಮೈಸೂರು ಸಿಲ್ಕ್ ಸೀರೆಗಳು ರಾಜ್ಯದ ಸಂಸ್ಕೃತಿಯ ಪ್ರತೀಕ- ಡಿ.ಕೆ. ರವಿ

 ರೇಷ್ಮೆ ಸೀರೆಗೆ ಮನಸೋಲದ ಹೆಂಗಳೆಯರೇ ಇಲ್ಲ.  ಅದರಲ್ಲೂ ನಮ್ಮ ಭಾಗದ ಮೈಸೂರು ಸಿಲ್ಕ್ ಸೀರೆ,   ನೀರೆಯರಿಗೆ ಭವ್ಯ ಪಾರಂಪರಿಕ ಉಡುಗೆಯ ಪ್ರತೀಕ ಎಂದೇ ಭಾವನೆ.  ಇತ್ತೀಚೆಗೆ ವಿದೇಶಿಗರಿಗೂ ಸೀರೆ ಉಡುಗೆಗೆ ಆಕರ್ಷಿತರಾಗುತ್ತಿದ್ದಾರೆ.  ಇದರಿಂದಾಗಿಯೇ ಮೈಸೂರು ಸಿಲ್ಕ್ ಸೀರೆಗಳು ವಿದೇಶಗಳಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿವೆ.  ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ.  ಭಾರತೀಯ ಮಹಿಳೆಯರಿಗೆ ಸೀರೆ ಎಂದರೆ ಅಚ್ಚು-ಮೆಚ್ಚು, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ರೇಷ್ಮೆ ಸೀರೆ ಉಡುಗೆಗೆ ಅಗ್ರಸ್ಥಾನ, ರೇಷ್ಮೆ ಸೀರೆಯಲ್ಲೇ ಸುಂದರತೆ ಇನ್ನೂ ಹೆಚ್ಚುತ್ತದೆ ಎನ್ನುವ ದೃಢವಿಶ್ವಾಸ.  ರಾಜ್ಯದಲ್ಲಿ ರೇ

ಷ್ಮೆ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದೇ ರೀತಿ ರೇಷ್ಮೆ ತಯಾರಿಕೆಯಲ್ಲಿಯೂ ರಾಜ್ಯ ಮುಂದಿದೆ.  ಮೈಸೂರು ಸಿಲ್ಕ್ ಸೀರೆ ಸಾಂಪ್ರದಾಯಿಕ ಮತ್ತು ಪಾರಂಪರಿಕ ಉಡುಗೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ.  ಇಂತಹ ಖ್ಯಾತಿ ಹೊಂದಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಗಂಗಾವತಿ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡಿದೆ.

  ಕರ್ನಾಟಕ ರೇಷ್ಮೆ ಉದ್ದಿಮೆ ಅಭಿವೃದ್ಧಿ ನಿಗಮವು ಗಂಗಾವತಿ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ನೆರವೇರಿಸಿದರು.  ಕುಟುಂಬ ಸಮೇತ ಮೇಳಕ್ಕೆ ಆಗಮಿಸಿದ್ದ ಅವರು, ನಂತರ ಮಾತನಾಡಿ, ಮೈಸೂರು ಸಿಲ್ಕ್ ಸೀರೆಗಳು ಕರ್ನಾಟಕ ರಾಜ್ಯದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಗುಣಮಟ್ಟದಲ್ಲಿ ಉತ್ಕೃಷ್ಟತೆಯನ್ನು ಹೊಂದಿವೆ ಎಂದು ಬಣ್ಣಿಸಿದರು.  
  ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಮಾರಾಟ ವ್ಯವಸ್ಥಾಪಕ ಫಿಲೋಮೆನ್ ರಾಜ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಮೈಸೂರು ಸಿಲ್ಕ್ ಉದ್ದಿಮೆ ಪ್ರಾರಂಭಗೊಂಡು ೧೦೦ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನಿಗಮವು ಗ್ರಾಹಕರಿಗೆ ಹಲವು ರಿಯಾಯಿತಿ ಸೌಲಭ್ಯವನ್ನು ಕಲ್ಪಿಸಿದೆ.  ಸರ್ಕಾರಿ ನೌಕರರಿಗೆ ಯಾವುದೇ ಬಡ್ಡಿ ಇಲ್ಲದೆ, ೧೦ ಸಮ ಕಂತುಗಳಲ್ಲಿ ಪಾವತಿಸುವ ಅವಕಾಶವನ್ನು ಒದಗಿಸಿದೆ.  ಅಲ್ಲದೆ ಮೈಸೂರು ಸಿಲ್ಕ್ ಸೀರೆಗಳ ಗುಣಮಟ್ಟ ಹಾಗೂ ಡಿಸೈನಿಂಗ್ ಅನ್ನು ಇನ್ನಷ್ಟು ವೈವಿಧ್ಯಮಯಗೊಳಿಸಿದ್ದು, ಅತ್ಯಂತ ಆಕರ್ಷಕವಾಗಿ ಹೊರತರಲಾಗುತ್ತಿದೆ.  ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಖರೀದಿಸಬಯಸಿದಲ್ಲಿ, ನಿಗಮದ ಮಾರಾಟ ಮೇಳಕ್ಕೆ ಬಂದು ಖರೀದಿಸುವಂತೆ ಕೋರಿದರು.  ಗಂಗಾವತಿ ತಹಸಿಲ್ದಾರ್ ಗಂಗಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Comment