ಬಾಪೂಜಿ ಇಕೋಕ್ಲಬ್‌ಗೆ ಚಾಲನೆ.

 ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಬಾಪೂಜಿ  ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತಿಚ್ಚಿಗೆ ಬಾಪೂಜಿ ಇಕೋಕ್ಲಬ್‌ಗೆ ಚಾಲನೆ ನೀಡಲಾಯಿತು. ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದ ಇತಿಹಾಸ ಉಪನ್ಯಾಸಕರಾದ ಎಚ್ ಎಸ್ ಬಾರಕೇರ ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಶಿ ನಡೆವುದರ ಅದರ ಮಹತ್ವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಮಾತನಾಡಿದರು. ಅತಿಥಿ ಸ್ಥಾನವನ್ನು ಮಂಜುನಾಥ ಬುರಡಗಿ ಗ್ಲೋಬಲ್ ಐ.ಟಿ.ಐ ಕಾಲೇಜು ಇವರು ವಹಿಸಿದ್ದರು. ಈ ಕಾಲೇಜಿನ ಪ್ರಾಚಾರ್ಯರಾದ ಪಿ.ಐ.ಡಿ ಗುಡಿಯವರು ಅಧ್ಯಕ್ಷತೆಯನ್ನು ವಹಿಸಿ ಇಕೋಕ್ಲಬ್ ರಾಷ್ಟ್ರೀಯ ಹಸಿರು ಪಡೆಯ ಅರ್ಥ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಕು.ಗೀರಿಜಾ ಕಟ್ಟಿಮನಿ ಹಾಗೂ ಸಂಗಡಿಗರು ಹಾಡಿದರು ಈ ಕಾರ್ಯಕ್ರಮ ಸ್ವಾಗತ ಭಾಷಣವನ್ನು ಎಸ್ ಬಿ ಹೂಗಾರರವರು ಮಾಡಿದರು. ಇಕೋಕ್ಲಬ್ ಸಂಯೋಜಕರಾದ ಎಸ್ ಎಸ್ ಶಶಿಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಕೊನೆಯಲ್ಲಿ ಉಪನ್ಯಾಸಕರಾದ ಶರೀಫ ಆರ್ ಕೆ  ಯವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.   

Leave a Reply