ಕೃಷಿ ವಿಮಾ ಯೋಜನೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ನಿಗದಿ

 ಪ್ರಸಕ್ತ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಕೆಲವು ಬೆಳೆಗಳನ್ನು ನಿಗದಿಪಡಿಸಲಾಗಿದ್ದು, ರೈತರು ವಿಮಾ ಯೋಜನೆಗೆ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.
  ಗಂಗಾವತಿ ತಾಲೂಕಿನ ಗಂಗಾವತಿ ಹೋಬಳಿಯ ಆನೆಗುಂದಿ, ಸಂಗಾಪುರ, ಮರಳಿ, ಚಿಕ್ಕಜಂತಕಲ್, ಗಂಗಾವತಿ ಮತ್ತು ನವಲಿ ಹೋಬಳಿಯ ಮಲ್ಲಾಪುರ, ಹುಲಿಹೈದರ ಹೋಬಳಿಯ ಹುಲಿಹೈದರ್ (ಗೌರಿಪುರ), ಕಾರಟಗಿ ಹೋಬಳಿಯ ಕಾರಟಗಿ, ಚೆಳ್ಳೂರು, ಬೂದಗುಂಪಾ, ಬೇವಿನಾಳ, ಮರ್ಲಾನಹಳ್ಳಿ, ಹುಳ್ಕಿಹಾಳ, ಯರಡೋಣ, ಮರಳಿ ಹೋಬಳಿಯ ಢಣಾಪುರ, ಶ್ರೀರಾಂಪುರ, ಹಣವಾಳ, ಹೇರೂರು, ಹೊಸಕೇರಾ, ನವಲಿ ಹೋಬಳಿಯ ನವಲಿ (ಕರಡೋಣ), ಚಿಕ್ಕಡಂಕನಕಲ್, ಸಿದ್ದಾಪುರ ಹೋಬಳಿಯ ಸಿದ್ದಾಪುರ, ಉಳೇನೂರು, ಗುಂಡೂರು, ಬೆನ್ನೂರು, ಮೂಷ್ಟೂರು, ವೆಂಕಟಗಿರಿ ಹೋಬಳಿಯ ವೆಂಕಟಗಿರಿ, ಆಗೋಲಿ, ಕೆಸರಹಟ್ಟಿ, ಚಿಕ್ಕಬೆಣಕಲ್, ಬಸಾಪಟ್ಟಣ, ವಡ್ಡರಹಟ್ಟಿ, ಕನಕಗಿರಿ ಹೋಬಳಿಯ ಕನಕಗಿರಿ (ಹಿರೇಖೇಡ, ಸುಳೇಕಲ್, ಚಿಕ್ಕಮಾದಿನಾಳ, ಮುಸಲಾಪುರ) ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಭತ್ತ (ನೀರಾವರಿ) ಪ್ರದೇಶವಾಗಿರುತ್ತದೆ. 
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಅಳವಂಡಿ, ಕವಲೂರು, ಹಟ್ಟಿ, ಬೆಟಗೇರಿ, ಮತ್ತೂರು, ಕಾತರಕಿ-ಗುಡ್ಲಾನೂರು, ಬಿಸರಳ್ಳಿ, ಹಲಗೇರಿ, ಬೋಚನಹಳ್ಳಿ, ಕೋಳೂರು, ಅಳವಂಡಿ ಮತ್ತು ಕೊಪ್ಪಳ ಹೋಬಳಿಯ ಹಿರೇಸಿಂದೋಗಿ, ಹಿಟ್ನಾಳ ಹೋಬಳಿಯ ಹೊಸಳ್ಳಿ, ಇರಕಲ್‌ಗಡ ಹೋಬಳಿಯ ಇರಕಲ್‌ಗಡ, ಕಿನ್ನಾಳ, ಹಾಸಗಲ್, ಕಲ್‌ತಾವರಗೇರಾ, ಇಂದರಗಿ, ಬೂದಗುಂಪಾ, ಚಿಕ್ಕಬೊಮ್ಮನಾಳ, ಇರಕಲ್‌ಗಡ ಮತ್ತು ಕೊಪ್ಪಳ ಹೋಬಳಿಯ ಲೇಬಗೇರಿ, ಕೊಪ್ಪಳ ಹೋಬಳಿಯ ಭಾಗ್ಯನಗರ, ಓಜನಹಳ್ಳಿ, ಗೊಂಡಬಾಳ, ಹಿರೇಬಗನಾಳ, ಕುಣಿಕೇರಿ, ಬಹದ್ದೂರಬಂಡಿ, ಕೊಪ್ಪಳ ಮತ್ತು ಇರಕಲ್‌ಗಡ ಹೋಬಳಿಯ ಮಾದಿನೂರು, ಕೊಪ್ಪಳ ಮತ್ತು ಹಿಟ್ನಾಳ ಹೋಬಳಿಯ ಗಿಣಗೇರಾ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನಜೋಳ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ಹನುಮನಾಳ, ನಿಲೋಗಲ್, ತುಗ್ಗಲದೋಣಿ, ಮಾಲಗಿತ್ತಿ, ಜಾಗೀರಗುಡದೂರು, ಹಿರೇಗೊಣ್ಣಾಗರ, ಹನುಮನಾಳ ಮತ್ತು ಹನುಮಸಾಗರ ಹೋಬಳಿಯ ಯರಗೇರಾ, ಬೆನಕನಾಳ, ಹನುಮಸಾಗರ ಹೋಬಳಿಯ ಹನುಮಸಾಗರ, ಕಬ್ಬರಗಿ, ಕಾಟಾಪೂರ, ಹೂಲಗೇರಿ, ಅಡವಿಭಾವಿ, ಚಳಗೇರಾ, ಹಿರೇಬನ್ನಿಗೋಳ, ಹನುಮಸಾಗರ ಮತ್ತು ಕುಷ್ಟಗಿ ಹೋಬಳಿಯ ಕೊರಡಕೇರಾ, ಕ್ಯಾದಿಗುಪ್ಪ, ತಳವಗೇರಾ, ಕುಷ್ಟಗಿ ಹೋಬಳಿಯ ಬಿಜಕಲ್, ದೋಟಿಹಾಳ, ಮುದೇನೂರು, ಕಂದಕೂರು, ಮೇಣದಾಳ, ಸಂಗನಾಳ, ಹಿರೇಮನ್ನಾಪೂರ, ತಾವರಗೇರಾ ಹೋಬಳಿಯ ತಾವರಗೇರಾ, ಕಿಲ್ಲಾರಹಟ್ಟಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಜ್ಜೆ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
 ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಹೋಬಳಿಯ ಮಾಟಲದಿನ್ನಿ, ಗುನ್ನಾಳ, ಹಿರೇಹರಳಿಹಳ್ಳಿ, ಹಿರೇವೆಂಕಲಕುಂಟ, ಗಾಣದಾಳ, ತಾಳಕೇರಿ, ಕುಕನೂರು ಹೋಬಳಿಯ ಕುಕನೂರು, ಮಂಡಲಗೇರಿ, ಭಾನಾಪುರ, ತಳಕಲ್, ರಾಜೂರು, ಇಟಗಿ, ಬನ್ನಿಕೊಪ್ಪ, ಯರೆಹಂಚಿನಾಳ, ಬೆಣಕಲ್, ವಣಗೇರಿ, ಕುಕನೂರು ಮತ್ತು ಮಂಗಳೂರು ಹೋಬಳಿಯ ಬಳಗೇರಿ, ಮಂಗಳೂರು ಹೋಬಳಿಯ ಮಂಗಳೂರು, ಕುದ್ರಿಮೋತಿ, ಹಿರೇಬಿಡನಾಳ, ಶಿರೂರು, ಚಿಕ್ಕಮ್ಯಾಗೇರಿ, ಮಂಗಳೂರು, ಹಿರೇವಂಕಲಕುಂಟ ಮತ್ತು ಯಲಬುರ್ಗಾ ಹೋಬಳಿಯ ಮುರಡಿ, ಬೇವೂರು, ಗೆದಗೇರಿ, ಯಲಬುರ್ಗಾ ಹೋಬಳಿಯ ಮುದೋಳ, ಹಿರೇಮ್ಯಾಗೇರಿ, ಬಂಡಿ, ಬಳೂಟಗಿ, ಕರಮುಡಿ, ಸಂಗನಹಾಳ, ಕಲ್ಲೂರು, ವಜ್ರಬಂಡಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನ ಜೋಳ (ಮಳೆಆಶ್ರಿತ) ಬೆಳೆ ನಿಗದಿಪಡಿಸಿದೆ. 
  ಮುಂಗಾರು ಹಂಗಾಮಿಗೆ ಜೂ.೩೦ ರೊಳಗಾಗಿ ಅಥವಾ ಬೆಳೆ ಬಿತ್ತಿದ ೩೦ ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ವಿಮೆ ಯೋಜನೆ : ವಿಮಾ ಕಂತು ವಿವರ
ಕೊಪ್ಪಳ ಮೇ. ೧೭ (ಕ.ವಾ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ ಇಂತಿದೆ.
        ಮುಸುಕಿನ ಜೋಳ (ನೀರಾವರಿ), ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟರಿಗೆ ವಿಮಾ ಮೊತ್ತ ೩೩೨೦೩ ರೂ.ಗಳಲ್ಲಿ ೬೬೪.೦೬ ರೂ. ಪ್ರತಿ ಹೆಕ್ಟರಿಗೆ ರೈತರು ವಿಮಾ ಕಂತು ಪಾವತಿಸಬೇಕು, ಮುಸುಕಿನ ಜೋಳ (ಮಳೆ ಆಶ್ರಿತ) ವಿಮಾ ಮೊತ್ತ ೧೧೬೦೦, ವಿಮಾ ಕಂತು- ೬೯೬ ಜೋಳ (ನೀ) ೨೦೨೭೩, ೪೦೫.೪೬.  ಜೋಳ (ಮ.ಆ.) ೧೧೦೩೪, ೫೪೦.೬೬, ಸಜ್ಜೆ (ನೀ) ೧೩೧೩೮, ೨೬೨.೭೬, ಸಜ್ಜೆ (ಮ.ಆ) ೮೮೪೨, ೧೭೬.೮೪, ತೊಗರಿ (ನೀ) ೧೯೩೪೦, ೮೭೦.೩೦, ತೊಗರಿ (ಮ.ಆ) ೧೩೦೦೦, ೬೫೦.೦೦, ಹೆಸರು (ಮ.ಆ.) ೪೯೦೦, ೨೭೮.೩೨, ಎಳ್ಳು (ಮ.ಆ.) ೮೫೦೦, ೫೧೦.೦೦, ಸೂರ್ಯಕಾಂತಿ (ನೀ) ೨೩೬೦೩, ೪೭೨.೦೬, ಸೂರ್ಯಕಾಂತಿ (ಮ.ಆ.) ೯೦೧೦, ೧೮೦.೨೦, ನೆಲಗಡಲೆ (ಶೇಂಗಾ) (ನೀ.) ೩೮೪೨೬, ೧೪೬೦.೧೮, ನೆಲಗಡಲೆ (ಶೇಂಗಾ) (ಮ.ಆ.) ೧೬೧೮೬, ೮೦೯.೩೦, ಭತ್ತ (ನೀ) ೪೧೬೨೭, ೧೨೪೮.೮೧, ಹರಳು (ಮ.ಆ.) ೧೭೬೦೦, ೧೦೧೩.೭೬, ನವಣೆ (ಮ.ಆ.) ೩೯೫೩, ೧೮೩.೮೨, ಹುರುಳಿ (ಮ.ಆ.) ೫೨೭೬, ೨೧೬.೩೨ ಈ ರೀತಿಯ ವಿಮಾ ಮೊತ್ತ ಮತ್ತು ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು   ತಿಳಿಸಿದ್ದಾರೆ.
Please follow and like us:
error