ಕೊಪ್ಪಳ ಜಿಲ್ಲಾ ೬ ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶೇಖರಗೌಡ ಮಾಲಿಪಾಟಿಲ ಆಯ್ಕೆ

 ಆಗಷ್ಟ ೨೩ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೬ ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಕುಷ್ಟಗಿ ತಾಲೂಕಿನ ಗುಮಗೇರಿಯ ಸಾಹಿತಿ ಹಾಗೂ ಸಂಘಟಕರಾದ ಶೇಖರಗೌಡ ಮಾಲಿಪಾಟಿಲರನ್ನು ಆಯ್ಕೆ ಮಾಡಲಾಗಿದೆ ಎಂದು ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಶನಿವಾರ ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಎಂ. ಸಾಧಿಕಲಿ, ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ, ಪತ್ರಕರ್ತರಾದ ಹರೀಶ ಹೆಚ್.ಎಸ್, ಜಿ.ಎಸ್. ಗೋನಾಳ, ವೈ.ಬಿ. ಜೂಡಿ, ಎನ್.ಎಮ್. ದೊಡ್ಡಮನಿ, ಮಂಜುನಾಥ ಗೊಂಡಬಾಳ, ಶಿಕ್ಷಕರಾದ ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ,  ವ್ಯಂಗ್ಯ ಚಿತ್ರಕಾರ ಬದರಿನಾಥ ಪುರೋಹಿತ, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಸಂಘಟಕರಾದ ಬಸವರಾಜ ಮಾಲಗಿತ್ತಿ, ಫಕೃದ್ದೀನ್ ತಳಕಲ್,  ಸಲೀಮ್ ಮಂಡಲಗೇರಿ, ಪುರಷತ್ತಮ ಜೂಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
Please follow and like us:

Related posts

Leave a Comment