ಫೆ. ೨೦ ರ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸನ್ನದ್ಧ.

ಕೊಪ್ಪಳ ಫೆ. 19 (ಕ ವಾ) ಪ್ರಸಕ್ತ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯ ಫೆ. ೨೦
ರಂದು ಮತದಾನ ಪ್ರಕ್ರಿಯೆ ಕೈಗೊಳ್ಳಲು ಕೊಪ್ಪಳ ಜಿಲ್ಲಾಡಳಿತ ಸನ್ನದ್ಧವಾಗಿದೆ.
ಜಿಲ್ಲಾ ಪಂಚಾಯತ್ :  ಕೊಪ್ಪಳ ಜಿಲ್ಲಾ ಪಂಚಾಯತ್‌ನ ಕುಷ್ಟಗಿ ತಾಲೂಕಿನ ೦೭ ಕ್ಷೇತ್ರಗಳಲ್ಲಿ ಹಾಗೂ ಕೊಪ್ಪಳ ತಾಲೂಕಿನ ೦೮ ಕ್ಷೇತ್ರಗಳಲ್ಲಿ ತಲಾ ೩೧ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಗಂಗಾವತಿ ತಾಲೂಕಿನ ೦೮ ಕ್ಷೇತ್ರಗಳಲ್ಲಿ ೨೯ ಹಾಗೂ ಯಲಬುರ್ಗಾ ತಾಲೂಕಿನ ೦೬ ಕ್ಷೇತ್ರಗಳಲ್ಲಿ ೨೬ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟಾರೆ   ಜಿಲ್ಲಾ ಪಂಚಾಯತ್‌ನ ೨೯ ಕ್ಷೇತ್ರಗಳಿಗೆ ೧೧೭ ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿದ್ದಾರೆ.
ತಾಲೂಕಾ ಪಂಚಾಯತ್ :  ತಾಲೂಕಾ ಪಂಚಾಯತ್ ಚುನಾವಣೆಗಳಿಗೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಾ ಪಂಚಾಯತ್‌ನ ೨೫ ಕ್ಷೇತ್ರಗಳಿಗೆ ೮೧ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೊಪ್ಪಳ ತಾಲೂಕಾ ಪಂಚಾಯತ್ ೨೯ ಕ್ಷೇತ್ರಗಳಿಗೆ ೯೫, ಗಂಗಾವತಿ ತಾಲೂಕಿನ ೩೧ ಕ್ಷೇತ್ರಗಳಿಗೆ ೧೦೪ ಹಾಗೂ ಯಲಬುರ್ಗಾ ತಾಲೂಕಾ ಪಂಚಾಯತ್‌ನ ೨೪ ಕ್ಷೇತ್ರಗಳಿಗೆ ೬೭ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕಾ ಪಂಚಾಯತ್‌ನ ಒಟ್ಟು ೧೦೯ ಕ್ಷೇತ್ರಗಳಲ್ಲಿ ಅಂತಿಮವಾಗಿ ೩೪೭ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ.
ಮತದಾರರು : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩,೯೪,೨೮೧-ಪುರುಷ ಹಾಗೂ  ೩,೮೯,೦೫೯-ಮಹಿಳಾ ಮತದಾರರು ಸೇರಿದಂತೆ ಒಟ್ಟು ೭,೮೩,೩೪೦ ಮತದಾರರಿದ್ದಾರೆ.
     ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಪುರುಷ-೯೩,೩೩೬, ಮಹಿಳೆ-೯೦,೯೨೫ ಸೇರಿದಂತೆ ಒಟ್ಟು ೧,೮೪,೨೬೧ ಮತದಾರರು, ಕೊಪ್ಪಳ ತಾಲೂಕಿನಲ್ಲಿ ಪುರುಷ-೧,೦೪,೨೯೫, ಮಹಿಳೆ-೧,೦೨,೧೧೦ ಸೇರಿದಂತೆ ಒಟ್ಟು ೨,೦೬೪೦೫ ಮತದಾರರು, ಗಂಗಾವತಿ ತಾಲೂಕಿನಲ್ಲಿ ಪುರುಷ-೧,೦೮,೯೩೭, ಮಹಿಳೆ-೧,೧೧,೨೦೨ ಸೇರಿದಂತೆ ಒಟ್ಟು ೨,೨೦,೧೩೯ ಮತದಾರರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಪುರುಷ-೮೭,೭೧೩ ಮತ್ತು ಮಹಿಳೆ-೮೪,೮೨೨ ಸೇರಿದಂತೆ ಒಟ್ಟು ೧,೭೨,೫೩೫ ಮತದಾರರು ಇದ್ದಾರೆ.
ಸೂಕ್ಷ್ಮ, ಅತಿಸೂಕ್ಷ್ಮ ಮತದಾನ ಕೇಂದ್ರಗಳು: ಜಿಲ್ಲೆಯಲ್ಲಿ ಅತೀ ಸೂಕ್ಷ್ಮ-೧೯೮, ಸೂಕ್ಷ್ಮ-೨೩೭, ಸಾಮಾನ್ಯ-೫೧೧ ಸೇರಿದಂತೆ ಒಟ್ಟು ೯೪೬ ಮತದಾನ ಕೇಂದ್ರಗಳಿವೆ.
      ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಅತೀಸೂಕ್ಷ್ಮ-೪೬, ಸೂಕ್ಷ್ಮ-೫೨ ಮತ್ತು ಸಾಮಾನ್ಯ-೧೨೦ ಸೇರಿದಂತೆ ಒಟ್ಟು-೨೧೮. ಕೊಪ್ಪಳ ತಾಲೂಕಿನಲ್ಲಿ ಅತೀಸೂಕ್ಷ್ಮ-೫೦, ಸೂಕ್ಷ್ಮ-೬೧ ಮತ್ತು ಸಾಮಾನ್ಯ-೧೩೩, ಒಟ್ಟು-೨೪೪.  ಗಂಗಾವತಿ ತಾಲೂಕಿನಲ್ಲಿ ಅತೀಸೂಕ್ಷ್ಮ-೫೭, ಸೂಕ್ಷ್ಮ-೬೬ ಮತ್ತು ಸಾಮಾನ್ಯ-೧೪೮, ಒಟ್ಟು-೨೭೧ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಅತೀಸೂಕ್ಷ್ಮ-೪೫, ಸೂಕ್ಷ್ಮ-೫೮ ಮತ್ತು ಸಾಮಾನ್ಯ-೧೧೦ ಸೇರಿದಂತೆ ಒಟ್ಟು-೨೧೩ ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ/ ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಂತಹ ಮತಗಟ್ಟೆಗಳಿಗೆ ಮತದಾನದ ದಿನದಂದು ಸೂಕ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಹಾಗೂ ವಿಡಿಯೋ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್‌ಗಳನ್ನು ನೇಮಕ ಮಾಡಲಾಗಿದೆ.
ಮತಗಟ್ಟೆ ಸಿಬ್ಬಂದಿ : ಜಿಲ್ಲೆಯಲ್ಲಿರುವ ಒಟ್ಟು ೯೪೬ ಮತಗಟ್ಟೆಗಳಿಗೆ ೧೦೪೧ ತಲಾ ಪಿಆರ್‌ಓ, ಎಪಿಆರ್‌ಒ, ಪಿಒ-೦೧, ಪಿಒ-೦೨ ಹಾಗೂ ಗ್ರೂಪ್-ಡಿ-೯೪೬ ಸೇರಿದಂತೆ ಒಟ್ಟು ೬೧೫೧ ಜನ ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
     ಈ ಪೈಕಿ ಕುಷ್ಟಗಿ ತಾಲೂಕಿನ ೨೧೮ ಮತಗಟ್ಟೆಗಳಿಗೆ ೨೪೦ ತಲಾ ಪಿಆರ್‌ಓ, ಎಪಿಆರ್‌ಒ, ಪಿಒ-೦೧, ಪಿಒ-೦೨ ಹಾಗೂ ಗ್ರೂಪ್‌ಡಿ-೨೧೮ ಸೇರಿದಂತೆ ಒಟ್ಟು ೧೪೧೮. ಕೊಪ್ಪಳ ತಾಲೂಕಿನ ೨೪೪ ಮತಗಟ್ಟೆಗಳಿಗೆ ೨೬೮ ತಲಾ ಪಿಆರ್‌ಓ, ಎಪಿಆರ್‌ಒ, ಪಿಒ-೦೧, ಪಿಒ-೦೨ ಹಾಗೂ ಗ್ರೂಪ್-ಡಿ-೨೪೪ ಸೇರಿದಂತೆ ಒಟ್ಟು ೧೫೮೪. ಗಂಗಾವತಿ ತಾಲೂಕಿನ ೨೭೧ ಮತಗಟ್ಟೆಗಳಿಗೆ ೨೯೮ ತಲಾ ಪಿಆರ್‌ಓ, ಎಪಿಆರ್‌ಒ, ಪಿಒ-೦೧, ಪಿಒ-೦೨ ಹಾಗೂ ಗ್ರೂಪ್-ಡಿ-೨೭೧ ಸೇರಿದಂತೆ ಒಟ್ಟು ೧೭೬೧ ಹಾಗೂ ಯಲಬುರ್ಗಾ ತಾಲೂಕಿನ ೨೧೩ ಮತಗಟ್ಟೆಗಳಿಗೆ ೨೩೫ ತಲಾ ಪಿಆರ್‌ಓ, ಎಪಿಆರ್‌ಒ, ಪಿಒ-೦೧, ಪಿಒ-೦೨ ಹಾಗೂ ಗ್ರೂಪ್-ಡಿ-೨೧೩ ಸೇರಿದಂತೆ ಒಟ್ಟು ೧೩೮೮ ಜನ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
೩೩೯ ವಾಹನಗಳ ಬಳಕೆ: ಮತಗಟ್ಟೆ ಸಿಬ್ಬಂದಿಗಳ ಪ್ರಯಾಣಕ್ಕಾಗಿ ಜಿಲ್ಲೆಯಲ್ಲಿ ೧೨೫ ಕೆಎಸ್‌ಆರ್‌ಟಿಸಿ ಬಸ್, ೭೯ ಕ್ರೂಸರ್, ೧೩೫ ಸರ್ಕಾರಿ ಜೀಪು ಸೇರಿದಂತೆ ಒಟ್ಟು ೩೩೯ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
     ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ೩೪ ಕೆಎಸ್‌ಆರ್‌ಟಿಸಿ ಬಸ್, ೨೪ ಕ್ರೂಸರ್, ೩೫ ಸರ್ಕಾರಿ ಜೀಪುಗಳು, ಒಟ್ಟು ೯೩ ವಾಹನಗಳು. ಕೊಪ್ಪಳ ತಾಲೂಕಿನಲ್ಲಿ ೩೪ ಬಸ್, ೨೦ ಕ್ರೂಸರ್, ೩೮ ಸರ್ಕಾರಿ ಜೀಪು, ಒಟ್ಟು ೯೨ ವಾಹನಗಳು. ಕುಷ್ಟಗಿ ತಾಲೂಕಿನಲ್ಲಿ ೨೭ ಬಸ್, ೨೧ ಕ್ರೂಸರ್, ೩೬ ಸರ್ಕಾರಿ ಜೀಪು, ಒಟ್ಟು ೮೪ ವಾಹನಗಳು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೩೦ ಬಸ್, ೧೪ ಕ್ರೂಸರ್, ೨೬ ಸರ್ಕಾರಿ ಜೀಪು ಸೇರಿದಂತೆ ಒಟ್ಟು ೭೦ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ..
೨೦೮೦ ವಿದ್ಯುನ್ಮಾನ ಮತಯಂತ್ರ ಬಳಕೆ : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ೯೪೬ ಮತಗಟ್ಟೆಗಳಿದ್ದು, ಜಿಲ್ಲಾ ಪಂಚಾಯತಿ ಮತದಾನಕ್ಕೆ ೦೧ ಮತ್ತು ತಾಲೂಕಾ ಪಂಚಾಯತಿ ಮತದಾನಕ್ಕೆ ೦೧ ರಂತೆ ಪ್ರತಿ ಮತಗಟ್ಟೆಗೆ ತಲಾ ಎರಡು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು.  ಇದರನ್ವಯ ೯೪೬ ಮತಗಟ್ಟೆಗಳಿಗೆ ೧೮೯೨ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ೧೮೮ ಹೆಚ್ಚುವರಿ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ.
     ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿರುವ ೨೧೮ ಮತಗಟ್ಟೆಗಳಿಗೆ ೪೩೬ ವಿದ್ಯುನ್ಮಾನ ಮತಯಂತ್ರಗಳು,  ೪೪ ಕಾಯ್ದಿರಿಸಿದ ಮತಯಂತ್ರಗಳು. ಕೊಪ್ಪಳ ತಾಲೂಕಿನಲ್ಲಿ ೨೪೪ ಮತಗಟ್ಟೆಗಳಿಗೆ ೪೮೮, ಕಾಯ್ದಿರಿಸಿದ್ದು ೪೮ ಮತಯಂತ್ರಗಳು.  ಗಂಗಾವತಿ ತಾಲೂಕಿನಲ್ಲಿ ೨೭೧ ಮತಗಟ್ಟೆಗಳಿಗೆ ೫೪೨, ಕಾಯ್ದಿರಿಸಿದ್ದು ೫೪ ಮತಯಂತ್ರಗಳು. ಯಲಬುರ್ಗಾ ತಾಲೂಕಿನಲ್ಲಿ ೨೧೩ ಮತಗಟ್ಟೆಗಳಿಗೆ ೪೨೬ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ೪೪ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ.
ಮಸ್ಟರಿಂಗ್, ಡಿ-ಮಸ್ಟರಿಂಗ್ ಸ್ಥಳ : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಗಳಿಗೆ ಸ್ಥಳ ನಿಗದಿಪಡಿಸಲಾಗಿದೆ.  ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದಲ್ಲಿ ಎಸ್.ಎಫ್.ಎಸ್ ಪ್ರೌಢಶಾಲೆ, ಗಂಗಾವತಿಯಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಯಲಬುರ್ಗಾದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ನಡೆಯಲಿದೆ.
     ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಂತಿಯುತ ಚುನಾವಣೆಗೆ ಎಲ್ಲ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

Please follow and like us:
error