ಕಲ್‌ತಾವರಗೇರಾದಲ್ಲಿ ಮಕ್ಕಳ ಹಕ್ಕು ವಿಶೇಷ ಗ್ರಾಮ ಸಭೆ

 

ಕೊಪ್ಪಳ : ತಾಲೂಕಿನ ಕಲ್‌ತಾವರಗೇರಾ ಗ್ರಾಮದಲ್ಲಿ ದಿನಾಂಕ ೨-೧೨-೨೦೧೪ ರಂದು ಗ್ರಾಮ ಪಂಚಾಯತಿಯಲ್ಲಿ ೨೦೧೪-೧೫ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು.

             ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಅಮರಮ್ಮ ಒಂಟಿಗಾರ ಅದ್ಯಕ್ಷರು ಗಾ.ಪಂ ಕಲತಾವರಗೇರಾ ಇವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಶರಣಯ್ಯ ಸಸಿಮಠ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಯುನೆಸೆಪನ್ ಸಂಗಪ್ಪ ಇವರು ವಿಷಯಗಳನ್ನು ತಿಳಿಸಿದರು. ಈ ಖಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ  ಶ್ರೀಮತಿ ಮಂಗಳಮ್ಮ ಭಜಂತ್ರಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಮತ್ತು ಎಲ್ಲಾ ಶಾಲೆಯ ಮಖ್ಯೋಪಾಧ್ಯಾಯರು, ಪ್ರೌಢಶಾಲಾ ಮಖ್ಯೋಪಾದ್ಯಾಯರು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಶಿಕ್ಷಕಿರು, ಆಶಾಕಾರ್ಯಕರ್ತೆಯರು ಶಾಲಾ ಮಕ್ಕಳು ಹಾಗೂ ಇನ್ನೂ ಮುಂತಾದವರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply