You are here
Home > Koppal News > ಹುಬ್ಬಳ್ಳಿ-ವಿಜಯವಾಡ ರೈಲು ಪ್ರತಿನಿತ್ಯ ಸಂಚಾರ

ಹುಬ್ಬಳ್ಳಿ-ವಿಜಯವಾಡ ರೈಲು ಪ್ರತಿನಿತ್ಯ ಸಂಚಾರ

ಕೊಪ್ಪಳ ಜಿಲ್ಲೆ ಮಾರ್ಗವಾಗಿ ವಾರಕ್ಕೆ ಮೂರು ದಿನ ಓಡುತ್ತಿದ್ದ ಹುಬ್ಬಳ್ಳಿ-ವಿಜಯವಾಡ ಎಕ್ಸಪ್ರೆಸ್ ರೈಲು ಜ. ೨೬ ರಿಂದ ಪ್ರತಿನಿತ್ಯ ಸಂಚರಿಸಲಿದೆ.
  ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಇದೀಗ ಹುಬ್ಬಳ್ಳಿ-ವಿಜಯವಾಡ ಮಾರ್ಗದ ರೈಲು ಇದೇ ಜ.೨೬ ರಿಂದ ಪ್ರತಿನಿತ್ಯವು ಬದಲಾದ ಸಮಯದಲ್ಲಿ ಕೊಪ್ಪಳ ಮಾರ್ಗವಾಗಿ ಸಂಚರಿಸಲಿದೆ. ರೈಲ್ವೆ ಇಲಾಖೆಯು ಈ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು  ವಿಜಯವಾಡದಿಂದ ರಾತ್ರಿ ೭-೪೫ ಕ್ಕೆ ಹೊರಡುವ ರೈಲು ಗಾಡಿ ಸಂಖ್ಯೆ: ೧೭೨೨೫ ರೈಲು ಬೆಳಿಗ್ಗೆ ೫-೪೦ ಕ್ಕೆ ಗುಂತಕಲ್, ೬-೫೩ ಕ್ಕೆ ಬಳ್ಳಾರಿ, ೭-೩೦ ಕ್ಕೆ ತೋರಣಗಲ್, ೮-೧೫ ಕ್ಕೆ ಹೊಸಪೇಟೆ, ೮-೩೫ ಕ್ಕೆ ಮುನಿರಾಬಾದ್, ೮-೫೫ ಕ್ಕೆ ಕೊಪ್ಪಳ, ೧೦-೦೮ ಕ್ಕೆ ಗದಗ, ೧೦-೨೫ ಕ್ಕೆ ಅಣ್ಣಿಗೇರಿ ಮೂಲಕ ಬೆಳಿಗ್ಗೆ ೧೧-೨೦ ಕ್ಕೆ ಹುಬ್ಬಳ್ಳಿ ತಲುಪಲಿದೆ.  ಪ್ರತಿನಿತ್ಯ ಮಧ್ಯಾಹ್ನ ೧-೩೦ ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ ೧೭೨೨೬  ರೈಲು, ಮಧ್ಯಾಹ್ನ ೨ ಗಂಟೆಗೆ ಅಣ್ಣಿಗೇರಿ, ೨-೨೫ ಕ್ಕೆ ಗದಗ, ೩-೩೦ ಕ್ಕೆ ಕೊಪ್ಪಳ, ೩-೫೩ ಕ್ಕೆ ಮುನಿರಾಬಾದ್, ೦೪-೦೫ ಕ್ಕೆ ಹೊಸಪೇಟೆ, ೦೪-೪೫ ಕ್ಕೆ ತೋರಟಗಲ್, ೦೫-೨೫ ಕ್ಕೆ ಬಳ್ಳಾರಿ, ೦೬-೩೫ ಕ್ಕೆ ಗುಂತಕಲ್ ಮಾರ್ಗವಾಗಿ ಮರುದಿನ ಬೆಳಿಗ್ಗೆ ೦೫-೧೫ ಕ್ಕೆ ವಿಜಯವಾಡ ತಲುಪಲಿದೆ.   ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿರುವ ಸಂಸದ ಸಂಗಣ್ಣ ಕರಡಿ ಅವರು, ರೈಲ್ವೆ ಇಲಾಖೆಯ ಸಹಕಾರಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ  ತಿಳಿಸಿದೆ.

Leave a Reply

Top