ಅಂಗವಿಕಲರ ರಿಯಾಯತಿ ಬಸ್ ಪಾಸ್ ದರ ಏರಿಕೆ ವಾಪಸ್:ಸರ್ಕಾರದ ಕ್ರಮಕ್ಕೆ ಸ್ವಾಗತ

ಕೊಪ್ಪಳ:ಅಂಗವಿಕಲರಿಗೆ ೧೦೦.ಕಿ.ಮೀ.ವ್ಯಾಪ್ತಿಯಲ್ಲಿ ಓಡಾಡಲು ಅನುಕೂಲವಾಗುವಂತೆ ನೀಡಲಾಗುವ ರಿಯಾಯತಿ ದರದ ಬಸ್ ಪಾಸ್ ದರವನ್ನು ರೂ.೬೬೦ ರಿಂದ ರೂ.೭೮೦ಕ್ಕೆ ಏರಿಕೆ ಮಾಡಿತ್ತು.ಇದರಿಂದ ಅಂಗವಿಕಲರಿಗೆ ತೊಂದರೆಯಾಗುತ್ತದೆ ಎಂದು ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಲಾಗಿತ್ತು.ಅಲ್ಲದೆ ನಿರುದ್ಯೋಗಿ ಅಂಗವಿಕಲರು ಕೂಡಾ ಒಂದು ದಿನದ ದರಣಿಯನ್ನು ಕೂಡಾ ಮಾಡಿದರ ಫಲವಾಗಿ ಪಾಸ್ ದರದ ಏರಿಕೆ ವಾಸಪ್ ಪಡೆದಿರುವ ಸರ್ಕಾರದ ಕ್ರಮವನ್ನು ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಹಾಗೂ ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ ಸ್ವಾಗತಿಸಿದ್ದಾರೆ.
Please follow and like us:
error