ಇಂದು ಡಾ||ಮಾತಾಜಿಯವರ ೭೦ನೇ ವರ್ಧಂತಿ ಕಾರ್ಯಕ್ರಮ

ಗಂಗಾವತಿ, ನಗರದ ರಾಷ್ಟ್ರೀಯ ಬಸವದಳದವರಿಂದ  ಬಸವಮಂಟಪದಲ್ಲಿ ರವಿವಾರ ಬಸವ ಧರ್ಮ ಪೀಠದ ದ್ವಿತಿಯ ಜಗದ್ಗುರು, ಪ್ರಥಮ ಮಹಿಳಾ ಜಗದ್ಗುರು,ಬಸವಣ್ಣನವರ ಮಾನಸ ಪುತ್ರಿಯಾದ  ಪರಮ ಪೂಜ್ಯ ಡಾ|| ಮಾತೆಮಹಾದೇವಿಯವರ ೭೦ನೇ ವರ್ಧಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈಕಾರ್ಯಕ್ರಮದಲ್ಲಿ ಮಾತಾಜಿಯವರ ಕುರಿತು ಉಪನ್ಯಾಸ ಮಾಡಲು ಸುಳೇಕಲ್ಲ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಮಾಡುತ್ತಿರುವ ಗದುಗಿನ ಶಂಕ್ರಣ್ಣ ಮತ್ತು ಲಿಂಗಾಯತ ಮಹಾಸಭಾ ತಾಲೂಕ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ, ನಿವೃತ್ತ ಪ್ರಾಚಾರ್ಯರಾದ ಓ.ಎಂ. ಬೊಳ್ಳಳ್ಳಿ ಮಾಡಲಿದ್ದಾರೆ. ಕಾರಣ ಬಸವಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ರಾಷ್ಟ್ರೀಯ ಬಸವದಳದ ಅಧ್ಯಕ್ಷ ಕೆ.ಪಂಪಣ್ಣ ಪಗರಕಟಣೆ ಮೂಲಕ ವಿನಂತಿಸಿದ್ದಾರೆ.   
Please follow and like us:

Related posts

Leave a Comment