You are here
Home > Koppal News > ಜಾತಿ ಜನಗಣತಿಯಲ್ಲಿ ಸವಿತಾ ಸಮಾಜ ಎಂದು ನಮೂದಿಸಿ

ಜಾತಿ ಜನಗಣತಿಯಲ್ಲಿ ಸವಿತಾ ಸಮಾಜ ಎಂದು ನಮೂದಿಸಿ

ಹೊಸಪೇಟೆ: ನಗರದ ರಾಣಿಪೇಟೆಯ ಶ್ರೀ ರಾಮ ದೇವಸ್ಥಾನದಲ್ಲಿ ಸವಿತಾ ಸಮಾಜ ಬಾಂಧವರು ಈಚೆಗೆ  ಸಭೆ ಸೇರಿ ಜಾತಿ ಜನಗಣತಿಯಲ್ಲಿ ಸವಿತಾ ಸಮಾಜ ಎಂದು ನಮೂದಿಸಲು ತೀರ್ಮಾನಿಸಿದರು.
ಸವಿತಾ ಸಮಾಜದ ಅಧ್ಯಕ್ಷ ಎನ್. ತಿಮ್ಮಪ್ಪ ಮಾತನಾಡಿ, ಕರ್ನಾಟಕ ಸರ್ಕಾರವು ಎಪ್ರಿಲ್ ೧೧ ರಿಂದ ೩೧ರ ವರೆಗೆ ಜಾತಿ ಜನಗಣತಿ ನಡೆಸುತ್ತಿದೆ. ಅದಕ್ಕಾಗಿ ಸಮಾಜದ ಬಾಂಧವರು ನಮ್ಮ ಜಾತಿಯ ಕಲಂನಲ್ಲಿ ’ಸವಿತಾ ಸಮಾಜ’ ಎಂದು ನಮೂದಿಸಬೇಕು. ಉಪಜಾತಿ ಕಲಂ ನಲ್ಲಿ ಕ್ಷೌರಿಕ, ನಾಯಿಂದ, ಕೆಲಸಿ, ಮಂಗಲಿ, ಭಂಡಾರಿ, ಭಜಂತ್ರಿ, ಹೀಗೆ ಯಾವುದಾದರೊಂದು ಹೆಸರು ನಮೂದಿಸಬೇಕು. ಇದರಿಂದ ಸಮಾಜದ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸ್ಥಿತಿ-ಗತಿ ತಿಳಿಯುತ್ತದೆ ಎಂದರು. ಸಭೆಯಲ್ಲಿ ನಗರಸಭಾ ಸದಸ್ಯರಾದ ರೂಪೇಶ್ ಕುಮಾರ್, ಕಂಪ್ಲಿ ವೆಂಕಟೇಶ್ ಮೂರ್ತಿ, ಪಾಂಡು, ರಘುವೀರ್, ವಿ. ನಾಗರಾಜ್, ವೆಂಕಣ್ಣ, ಹನುಮನಹಳ್ಳಿ ವೇಣುಗೋಪಾಲ, ಜಿಲ್ಲಾ ಕಾರ್ಯದರ್ಶಿ ಜಾನಕಿ ರಾಮ, ಘಟಕ ಅಧ್ಯಕ್ಷ ಲಕ್ಷ್ಮೀ ಪತಿ, ವೆಂಕಟರಮಣ, ಅನಂತಶಯನಗುಡಿ ಮಂಜುನಾಥ, ಡಿ. ಶ್ರೀನಿವಾಸ, ಮುಂತಾದವರು ಹಾಜರಿದ್ದರು. 

Leave a Reply

Top