ಸಾಂಸ್ಕೃತಿಕ ಸೌರಭ

ಕೊಪ್ಪಳ, ಜೂ. ೨೮ : ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜೂನ್ ೩೦ರಂದು ಸಂಜೆ ೬ ಗಂಟೆಗೆ ನಗರದ ಸತ್ಯಧ್ಯಾನಪುರ ಬಡಾವಣೆಯ ಪ್ರಮೋದ ಮಂದಿರದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಕಲಾವಿದ ಮಾಧವರಾವ್ ಇನಾಮದಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ನೂತನ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆಯಲ್ಲಿ ವಿಶೇಷ ಆಹ್ವಾನಿತರಾಗಿ ನಗರಸಭೆ ನೂತನ ಸದಸ್ಯರಾದ ಶ್ರೀಮತಿ ವಿಜಯಾ ಹಿರೇಮಠ ಹಾಗೂ ಪ್ರಾಣೇಶ ಮಾದಿನೂರ, ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಾ. ವಿ.ಬಿ.ರಡ್ಡೇರ, ಉದ್ಯಮಿ ಅಭಯಕುಮಾರ ಹೇಮರಾಜ ಶರ್ಮಾ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರ್‍ಡಡಿ, ಶಿಕ್ಷಣ ಪ್ರೇಮಿ ರಾಘವೇಂದ್ರ ಉಪಾದ್ಯ ಹಾಗೂ ಗುತ್ತಿಗೆದಾರ ಸುರೇಶ ಗಂಗೂರ ಪಾಲ್ಗೊಳ್ಳುವರು.
ಪಂ. ವಿನಾಯಕತೊರವಿ ಅವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಲಚ್ಚಣ್ಣ ಹಳೆಪೇಟಿ ಅವರು ಸುಗಮಸಂಗೀತ ಕಾರ್ಯಕ್ರಮ ನೀಡುವರು. ಬೆಂಗಳೂರಿನ ಕು.ಶೃತಿ ಭಟ್ ಹಾರ್ಮೋನಿಯಂ ಹಾಗೂ ಶರಣಕುಮಾರ ಘತ್ತರಗಿ, ಶಿವಲಿಂಗಪ್ಪ ಹಳೆಪೇಟಿ ಅವರು ತಬಲಾಸಾಥ್ ನೀಡುವರು ಎಂದು ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಲಚ್ಚಣ್ಣ ಹಳೆಪೇಟಿ  ತಿಳಿಸಿದ್ದಾರೆ. 
Please follow and like us:
error