ಕವಿಸಮಯ -೪೨: ಈ ವಾರದ ಅತಿಥಿ ಶರಣಪ್ಪ ಬಾಚಲಾಪೂರ

ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ..ಪ್ರತಿ ರವಿವಾರ ಸಂಜೆ ಜರುಗುವ ಕಾರ್‍ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವರು ,ಓದಿದ ಕವಿತೆಗಳ ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು. ಈ ವಾರ ಕಥೆಗಾರರಾದ ಶರಣಪ್ಪ ಬಾಚಲಾಪೂರ ಕಾರ್‍ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾರ್ಗದರ್ಶನ ಮಾಡಲಿದ್ದಾರೆ ನಂತರ ಸಂವಾದ ಕಾರ್‍ಯಕ್ರಮ ನಡೆಯಲಿದೆ. ಈ ಕವಿ ಸಮಯ ಕಾರ್‍ಯಕ್ರಮ ರವಿವಾರ ೧೩-೧-೨೦೧೧ ರಂದು ನಗರದ ಪ್ರವಾಸಿ ಮಂದಿರದಲ್ಲಿ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಮಹೇಶ ಬಳ್ಳಾರಿ ೯೦೦೮೯೯೬೬೨೪,ಶಿವಪ್ರಸಾದ ಹಾದಿಮನಿ ೯೯೧೬೫೨೫೨೮೯ ಸಂಪರ್ಕಿಸಿ.
Please follow and like us:
error

Related posts

Leave a Comment