ಗಜಲ್ ಸಾಮ್ರಾಟ್ ಮೆಹದಿ ಹಸನ್ ನಿಧನಕ್ಕೆ ಸಂತಾಪ

ಕೊಪ್ಪಳ : ಗಜಲ್ ಕಿಂಗ್ ಎಂದೇ ಖ್ಯಾತರಾಗಿದ್ದ ಗಜಲ್ ಗಾಯಕ ಮೆಹದಿ ಹಸನ್‌ರ ನಿಧನಕ್ಕೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ತಮ್ಮ ಅದ್ಭುತ ಹಾಡುಗಾರಿಕೆಯಿಂದ ಭಾರತ, ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಗಜಲ್ ಕಿಂಗ್ ನಿರ್ಗಮನ ಗಜಲ್ ಕ್ಷೇತ್ರಕ್ಕಾದ ನಷ್ಟ ಎಂದು ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ., ಪ್ರಮೋದ ತುರ್ವಿಹಾಳ, ಅಲ್ಲಾಗಿರಿರಾಜ್, ವಿಠ್ಠಪ್ಪ ಗೋರಂಟ್ಲಿ,ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಮಲ್ಲನಗೌಡರ, ಎನ್.ಜಡೆಯಪ್ಪ ಸೇರಿದಂತೆ  ಸಕಲ ಕವಿಸಮೂಹ ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.
Please follow and like us:
error