ಮೀಡಿಯಾ ಕ್ಲಬ್‌ನಿಂದ ಸಂತಾಪ

    ಕೊಪ್ಪಳ :

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವಿಜಯವಾಣಿ ಪತ್ರಕರ್ತ ಮಂಜುನಾಥ ಆನೆದಾಳಿಯಿಂದಾಗಿ ಮೃತಪಟ್ಟಿದ್ದು ಕೊಪ್ಪಳ ಮೀಡಿಯಾ ಕ್ಲಬ್‌ನ ಪದಾಽಕಾರಿಗಳು ಹಾಗೂ ಸದಸ್ಯರು ಸೋಮವಾರ ಸಂತಾಪ ಸಭೆ ಹಮ್ಮಿಕೊಂಡಿತ್ತು. ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರು, ಪತ್ರಕರ್ತರು ಈಚೆಗಿನ ದಿನಗಳಲ್ಲಿ ಸರಕಾರದ ಹಾಗೂ ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿಯಿಂದ ಪ್ರಾಣ ತೆರುತ್ತಿರುವುದು ಶೋಚನೀಯ ಎಂದು ಕಂಬನಿ ಮಿಡಿದರು. ಬಸವರಾಜ ಶೀಲವಂತರ್ ಮಾತನಾಡಿ, ಈಗಿನ ದಿನಗಳಲ್ಲಿ ಪತ್ರಕರ್ತರು ಅಭದ್ರತೆಯ ನಡುವೆಯೇ ಬದುಕು ನಡೆಸುತ್ತಿದ್ದಾರೆ. ಸರಕಾರ ಪತ್ರಕರ್ತರ ಭದ್ರತೆ ಹಾಗೂ ರಕ್ಷಣೆಗೆ ಗಮನ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಸವರಾಜ ಕರುಗಲ್, ದೇವು ನಾಗನೂರು, ಮಹೇಶಗೌಡ ಭಾನಾಪೂರ, ನಾಭಿರಾಜ ದಸ್ತೇನವರ್. ಸಂತೋಷ ದೇಶಪಾಂಡೆ, ಶ್ರೀಪಾದ ಅಯಾಚಿತ್, ಪ್ರಕಾಶ ಕಂದಕೂರ, ಶಿವರಾಜ ನುಗಡೋಣಿ, ದತ್ತು ಕಮ್ಮಾರ, ಗಂಗಾಧರ ಬಂಡಿಹಾಳ, ಗುರುರಾಜ.ಬಿ.ಆರ್., ಶರತ್ ಹೆಗ್ಡೆ, ಬಸವರಾಜ ಬಿನ್ನಾಳ, ಈರಣ್ಣ ಬಡಿಗೇರ, ಸಮೀರ ಪಾಟೀಲ್, ಮುಕ್ಕಣ್ಣ ಕತ್ತಿ, ಸಿರಾಜ್ ಬಿಸರಳ್ಳಿ ಇದ್ದರು.

Please follow and like us:
error